ಜಿಲ್ಲೆ

ಗೌರವ ಧನಕ್ಕೆ ಮನವಿ

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ ಗೌರವ ಧನ ತಡೆ ಹಿಡಿದ ಕಾರಣ, ಕೊಡಗು ಜಿಲ್ಲೆಯ ಎಲ್ಲಾ ಪುನರ್ ವಸತಿ ಕಾರ್ಯಕರ್ತರು ಸೇರಿ ಸಭೆ ನಡೆಸಿ ತಡೆಹಿಡಿದ ಗೌರವ ಧನ ಖಾತೆಗೆ ಜಮೆ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದರು.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿದ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು, ತಮ್ಮ ಹಾಜರಾತಿಯನ್ನು ಬೆಳಿಗ್ಗೆ ೧೦:೩೦ಗಂಟೆಗೆ ಹಾಗೂ ಸಂಜೆ ೪:೦೦ಗಂಟೆಗೆ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಪುನರ್ವಸತಿ ಕಾರ್ಯಕರ್ತರ ರಾಜ್ಯ ಅಧ್ಯಕ್ಷ ಪ್ರವೀಣ್ ನಾಯಕ್, ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷ

ತಿರುಮಲೇಶ್ವರ, ಹಾಗೂ ೫೦ಕ್ಕೂ ಹೆಚ್ಚು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಪಾಲ್ಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.