ಹುಬ್ಬಳ್ಳಿ : ಅಣ್ಣಿಗೇರಿ ತಾಲೂಕಿನ ನೂತನ ಪಿಎಲ್ಡಿ ಬ್ಯಾಂಕಿಗೆ ನಬಾರ್ಡ್ ಹಾಗೂ ಕೇಂದ್ರದ ವಿವಿಧ ಯೋಜನೆಗಳಿಂದ ಅನುದಾನ ಒದಗಿಸುವಂತೆ ಬ್ಯಾಂಕಿನ ಸಂಸ್ಥಾಪಕ ದೇವರಾಜ ದಾಡಿಬಾವಿ ನೇತೃತ್ವದ ನಿರ್ದೇಶಕರ ತಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಆಗ್ರಹಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಹುಬ್ಬಳ್ಳಿಯ ಅವರ ನಿವಾಸದಲ್ಲಿ ಭೇಟಿಯಾದ ನಿಯೋಗ, ಬೆಳೆ ಸಾಲ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ರೈತರ ಶ್ರೇಯೋಭಿವೃದ್ಧಿಗೆ ಬ್ಯಾಂಕ್ ಶ್ರಮಿಸಲು ತೀರ್ವನಿಸಿದೆ ಎಂದು ತಿಳಿಸಿದರು.
ನವಲಗುಂದ ತಾಲೂಕು ಬಿಜೆಪಿ ಅಧ್ಯಕ್ಷ ಮುತ್ತಣ್ಣ ಮನಮಿ, ನವಲಗುಂದ ನಗರ ಘಟಕ ಬಿಜೆಪಿ ಅಧ್ಯಕ್ಷ ಸಾಯಿಬಾಬಾ ಆನೆಗುಂದಿ, ಮುಖಂಡರಾದ ಸಿದ್ದನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಗಾಣಿಗೇರ, ಪರಮೇಶ್ವರಪ್ಪ ಯಡ್ರಾವಿ, ಶಿವಯೋಗಿ ಸುರಕೋಡ ಹಾಗೂ ಇತರರು ಹಾಜರಿದ್ದರು.