ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಶಾಸಕ ಕೆ.ಎಸ್.ಆನಂದ್ ಮನವಿ ಸಲ್ಲಿಸಿದರು. 
ಜಿಲ್ಲೆ

ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮನವಿ

ಎಸ್.ಎನ್.ರವೀಂದ್ರ

ಕಡೂರು: ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ರೈಲ್ವೆ ಗೇಟ್‌ನಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ರೈಲ್ವೆ ಮೇಲ್ಸೇತುವೆಯನ್ನು ಗಣಪತಿ ಪೆಂಡಾಲ್ ಮುಂಭಾಗದ ರಸ್ತೆಯಿಂದ ಸುಭಾಷ್ ವೃತ್ತದವರೆಗೆ ನಿರ್ಮಿಸಲು ಅನುಮತಿ ನೀಡಲು, ಕಡೂರು ರೈಲ್ವೆ ನಿಲ್ದಾಣದಲ್ಲಿ ಹಿರಿಯ ಪ್ರಯಾಣಿಕರಿಗೆ ಎಸ್ಕಲೇಟರ್ ಅಳವಡಿಸಿ, ಆಧುನಿಕವಾಗಿ ಸ್ವಚ್ಛತೆ, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಶಾಸಕ ಕೆ.ಎಸ್.ಆನಂದ್ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ರೈಲ್ವೆ ಸಚಿವರು ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕ ತಿಳಿಸಿದ್ದಾರೆ.