ಸುಳ್ಯ: ಅರಂತೋಡು ಎಲಿಮಲೆ ಲೋಕೋಪಯೋಗಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆ ಸುಳ್ಯ ಶಾಸಕರಿಗೆ, ತಹಸೀಲ್ದಾರ್‌ಗೆ, ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ ಈ ಹಿಂದೆ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರು, ಕೊಡಗು ಜಿಲ್ಲಾ ಯಾತ್ರಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸಲು ಅತಿ ಹತ್ತಿರದ ರಸ್ತೆ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯರಸ್ತೆಯಾಗಿದ್ದು, ಈ ರಸ್ತೆಯಲ್ಲಿ ದಿನಂಪ್ರತಿ ಯಾತ್ರಿಕರ ಸಾವಿರಾರು ವಾಹನಗಳು, ಸ್ಥಳೀಯ ವಾಹನಗಳು, ಸರ್ಕಾರಿ ಬಸ್‌ಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ವಾಡುತ್ತಿದ್ದಾರೆ.
ಇಕ್ಕಟ್ಟಾದ ಈ ರಸ್ತೆ ಅಭಿವೃದ್ಧಿ ವಾಡಬೇಕೆಂದು ಹಲವಾರು ವರ್ಷಗಳಿಂದ ಮನವಿ ವಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೇಸತ್ತ ಈ ಭಾಗದ ಜನತೆ, ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಮುಂದಾಳತ್ವದಲ್ಲಿ ಚುನಾವಣಾ ಬಹಿಷ್ಕರಿಸಿ ಹೋರಾಟ ಮಾಡಿದ ಫಲವಾಗಿ ಅರಂತೋಡಿನಿಂದ ಪಿಂಡಿಮನೆವರೆಗೆ 3 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಿದೆ. ನಾಗರಿಕರ ಬೇಡಿಕೆ ಕನಿಷ್ಠ ಅಡ್ತಲೆವರೆಗೆ ರಸ್ತೆ ಅಭಿವೃದ್ಧಿಪಡಿಸಬೇಕು ಎಂದಾಗಿದ್ದು, ಆ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಭವಾನಿಶಂಕರ ಅಡ್ತಲೆ, ರಂಜಿತ್ ಅಡ್ತಲೆ, ಕೇಶವ ಮೇಲಡ್ತಲೆ ಮೋಹನ್ ಪಂಜದ ಬೈಲ್ ಇದ್ದರು.