ಸಿದ್ದಾಪುರ: ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಹಾಗೂ ಬೆಳೆ ಬೆಳೆಯಲಾರದ ಸ್ಥಿತಿ ಉಂಟಾಗುವುದರಿಂದ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ವಿವಿಧ ಸಂಘಟನೆಗಳು, ರೈತ ಮುಖಂಡರು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಸೀಲ್ದಾರ್, ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ನಿತ್ಯದ ಮಳೆಯ ವಿವರ ಹಾಗೂ ತಾಲೂಕಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಶೇ.62ರಷ್ಟು ಮಳೆ ಕೊರತೆ ಇದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೂ ಮನವಿ ನೀಡಿದ್ದಾರೆ ಎಂದರು.
ತಾಲೂಕು ನಿವೃತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ರೈತ ಸಂಘದ ಇಲಿಯಾಸ್ ಸಾಬ್, ವೀರಭದ್ರನಾಯ್ಕ, ಗಾಂಧೀಜಿ ನಾಯ್ಕ, ಪಾಂಡುರಂಗ ಚನ್ಮಾವ, ವಿನಾಯಕ ಕೊಂಡ್ಲಿ, ಎಚ್.ಕೆ. ಶಿವಾನಂದ, ರೇವಣ್ಣ, ಶಾಂತ ಗೌಡರ್, ಲಕ್ಷ್ಮಣ ನಾಯ್ಕ, ಎನ್.ಟಿ. ನಾಯ್ಕ, ಸುರೇಶ ನಾಯ್ಕ, ಲೀನಾ ಫರ್ನಾಂಡಿಸ್, ಎಂ.ಡಿ. ನಾಯ್ಕ ಇತರರಿದ್ದರು.