ಜಿಲ್ಲೆ

ಶಾಲಾ ಕೊಠಡಿ ನಿರ್ಮಾಣಕ್ಕೆ ಮನವಿ

ರಾಘವೇಂದ್ರಗೌಡ ಭೀ ಪಾಟೀಲ್

ನಾಗರಮುನ್ನೋಳಿ: ನೂರು ವರ್ಷ ಪೂರೈಸಿರುವ ಗ್ರಾಮದ ನಮ್ಮೂರ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಕೊಠಡಿ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊದರೆಯಾಗುತ್ತಿದೆ. ಕೂಡಲೆ 6 ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಬಡಿಗೇರ ಈಚೆಗೆ ಮನವಿ ಮಾಡಿದರು

ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗನೆ ಕೊಠಡಿ ನಿರ್ಮಿಸಲಾಗುವುದು. ಶಾಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದರು. ಯುವ ನಾಯಕ ರಾಹುಲ್ ಜಾರಕಿಹೊಳಿ, ಲಕ್ಷ್ಮಣರಾವ ಚಿಂಗಳೆ, ಮಾಹಾವೀರ ಮೊಹಿತೆ, ಶಿವಾನಂದ ಮರ‌್ಯಾಯಿ, ಶಿವು ಪಾಟೀಲ, ಶಂಕರಗೌಡ ಪಾಟೀಲ, ಲಕ್ಷ್ಮಣ ಮಂಗಿ , ಕಿರಣ ರಜಪೂತ, ರಾಜು ಚೌಹಾಣ, ಪ್ರಭಾಕರ ಕೋರೆ, ಅಮಿತ್ ಕೋಳಿ ಉಪಸ್ಥಿತರಿದ್ದರು.