ನರಗುಂದ: ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ನೌಕರರು ಶಿರಸ್ತೇದಾರ ಎಸ್. ಸುನಂದ ಮೂಲಕ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ನೌಕರರ ಸಂಘದ ಖಜಾಂಚಿ ಬೀಬಿಜಾನ ಮುಲ್ಲಾನವರ ಮಾತನಾಡಿ, ಬಿಸಿಯೂಟ ನೌಕರರಿಗೆ 1 ಸಾವಿರ ರೂಪಾಯಿ ಹೆಚ್ಚುವರಿ ಗೌರವಧನ ನೀಡಬೇಕು, ನಿವೃತ್ತರು ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರಿಗೆ 1ಲಕ್ಷ ರೂಪಾಯಿ ಇಡಿಗಂಟು ನೀಡಬೇಕು. ಎಸ್‌ಡಿಎಂಸಿ ಅಧ್ಯಕ್ಷರಿಗೆ ನೀಡಿರುವ ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆದಾರರಿಗೆ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದರು.
ಮಂಜುಳಾ ಮುಳ್ಳೂರ, ಸಿದ್ದವ್ವ ಬೆಳವಣಿಕಿ, ವಿಜಯಲಕ್ಷ್ಮೀ ಕುಂದಗೋಳ, ಮಂಜುಳಾ ತಂಬೂರಿ, ಜನ್ನತಭಿ ಶಿರೋಳ, ಶಶಿಕಲಾ ಗದಗಿನ, ಹೇಮವ್ವ ಜಗಾಪೂರ, ಗೌರವ್ವ ಮುಳ್ಳೂರ, ಶಿವಕ್ಕ ಸಾಳುಂಕೆ, ಶೋಭಾ ಕೋರಿ, ಗಂಗವ್ವ ಗುಡದನ್ನವರ, ಫಕೀರವ್ವ ಕುರಿ, ನೀಲವ್ವ ಸಂಕಧಾಳ, ಸವಿತಾ ಬೆನಕೊಪ್ಪ, ಶಂಷಾದ್ ಮಕಾನದಾರ, ಯಶೋಧಾ ಶೆಟ್ಟೆಣ್ಣವರ, ದಾವಲಬಿ ಮುಲ್ಲಾನವರ, ಉಪಸ್ಥಿತರಿದ್ದರು.