ಜಿಲ್ಲೆ

ಖಾತೆ ಪರಿಶೀಲಿಸಲು ಮನವಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಆಗದಿರುವ ರೈತರು ಖಾತೆ ಹೊಂದಿರುವ ಬ್ಯಾಂಕ್​ಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪಡೇಟ್​ ಮತ್ತು ಪ್ರೂಟ್ಸ್​ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ ಖಾತರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕೌಂಟ್​ಗಳನ್ನು ನಿರ್ಬಂಧಿ-ಸಿರುವುದು ಅಥವಾ ಫ್ರೀಜ್​, ಖಾತೆ ಬಂದಾಗಿರುವ ಲಾನುಭವಿಗಳು ಬ್ಯಾಂಕ್​ಗೆ ತೆರಳಿ ಮತ್ತೆ ಖಾತೆ ಆರಂಭಿಸಬೇಕು. ್ರೂಟ್ಸ್​ ಅಪ್​ಡೇಟ್​ನಲ್ಲಿ ಆಧಾರ್​ ಹೆಸರು ಹೊಂದಿಕೆಯಾಗುತ್ತಿಲ್ಲ. ಆ ರೈತರು ್ರೂಟ್ಸ್​ ತಂತ್ರಾಂಶದಲ್ಲಿ ಹೆಸರು ಅಪ್ಡೇಟ್​ ಮಾಡಿಸಬೇಕು. ಆಧಾರ್​ ಅನ್ನು ಬ್ಯಾಂಕ್​ನೊಂದಿಗೆ ಸೀಡ್​, ಖಾತೆಗೆ ಆಧಾರ್​ ಮ್ಯಾಪ್​ ಹಾಗೂ ಎನ್​ಪಿಸಿಐ ಸೀಡಿಂಗ್​ ಸಮಸ್ಯೆ ಇರುವ ಲಾನುಭವಿಗಳು ಬ್ಯಾಂಕ್​ಗೆ ಹೋಗಿ ಎನ್​ಪಿಸಿಐ ಮಾಡಿಸಬೇಕು. ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರ ಅಥವಾ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.