ಮಸರೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಳಲಿ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪುಟ್ಟಸ್ವಾಮಿ ಗೌಡ, ಮುರುಗೇಶಪ್ಪ, ಕುಮಾರಗೌಡ ಇತರರಿದ್ದರು.  
ಜಿಲ್ಲೆ

ಪ್ರತಿಷ್ಠೆಗಳೇ ಸಂಬಂಧಗಳಿಗೆ ಮಾರಕ

Shivamogga - Desk - Megha MS

ರಿಪ್ಪನ್‌ಪೇಟೆ: ಜೀವನದಲ್ಲಿ ಹಿಂದೆ ನೋಡಿ ತಿಳಿದುಕೊಳ್ಳಬೇಕು, ಮುಂದೆ ನೋಡಿ ಬದುಕಬೇಕು ಎಂದು ಮಳಲಿ ಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಸರೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮುಖದಲ್ಲಿ ನಗುವಿರಲಿ, ಹೃದಯದಲ್ಲಿ ಪ್ರೀತಿ ಇರಲಿ, ಜೀವನದಲ್ಲಿ ಒಂದು ಗುರಿ ಇರಲಿ, ಆ ಗುರಿ ಮುಟ್ಟಲು ಸಮರ್ಥ ಗುರು ಹೊಂದಬೇಕು. ಶ್ರೀ ವೀರಭದ್ರ ಸ್ವಾಮಿಯು ದುಷ್ಟರ ಸಂಹಾರಕ ಮತ್ತು ಶಿಷ್ಟರ ಪರಿಪಾಲಕನಾಗಿದ್ದಾನೆ. ಅಂತಹ ಮಹಿಮನ ಕೃಪೆಯಿಂದ ದುರ್ಗುಣಗಳು ದೂರವಾಗಿ ಸದ್ಗುಣಗಳು ಪ್ರಾಪ್ತವಾಗಲಿ ಎಂದರು.
ಪುಟ್ಟಸ್ವಾಮಿ ಗೌಡ, ಮುರುಗೇಶಪ್ಪ, ಗಣೇಶಪ್ಪ, ಕುಮಾರಗೌಡ, ಅರ್ಚಕರಾದ ರಾಚಪ್ಪ, ಶಿವಾನಂದ ಇತರರಿದ್ದರು.