ಸಿರಿಗೇರಿ: ಗ್ರಾಮದ ಹುತಾತ್ಮ ವೀರಯೋಧ ಮಂಜುನಾಥನಂತೆ ಪ್ರತಿಯೊಬ್ಬ ಯುವಕರು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಸಾರ್ಥಕ ಬದುಕು ಸಾಗಿಸಬೇಕು ಎಂದು ಪಿಡಿಒ ಉಪ್ಪಾರ್ ರಾಮಪ್ಪ ಹೇಳಿದರು.
ಗ್ರಾಮದ ವೀರಯೋಧ ಮಂಜುನಾಥ ಸ್ಮಾರಕದ ಬಳಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಮ್ಮು-ಕಾಶ್ಮೀರದ ಬಾರ ಮುಲ್ಲಾ ಗಡಿಯಲ್ಲಿ ವೀರಮರಣ ಹೊಂದಿದ ವೀರಯೋಧ ಮಂಜುನಾಥ ತ್ಯಾಗದ ಸಂಕೇತವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರು ಬಾಲಕಿಯರ ಪ್ರೌಢಶಾಲೆ ದೈಹಿಕ ಶಿಕ್ಷಕ ಕೃಷ್ಣಮೂರ್ತಿ, ಹುತಾತ್ಮ ಯೋಧನ ಸಹೋದರ ಎಚ್ .ನಾಗರಾಜ, ಸಹೋದರಿ ಶಾರದಾ, ಪ್ರಮುಖರಾದ ಮುರ್ಷಿದ್ ಅಹಮದ, ಡಿ. ಗೋಪಾಲಕೃಷ್ಣ ಶೆಟ್ಟಿ, ಬಿ. ತೇಜಮೂರ್ತಿ, ನಿಜಾಮುದ್ದೀನ್, ರಂಜಿತ್ ಕುಮಾರ್, ಎನ್. ವಿರೂಪಾಕ್ಷಿ, ಪುನೀತ ಕುಮಾರ್, ಖಾಜಾಪೀರ, ಸಿದ್ದರಾಮಯ್ಯ, ದಾಸಪುರ ಬುಳ್ಳಪ್ಪ ಇತರರಿದ್ದರು.