ಜಿಲ್ಲೆ

ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ

ಸೋಮಲಿಂಗ ತಳವಾರ

ರಾಮದುರ್ಗ: ಅದ್ದೂರಿ ಗಣರಾಜ್ಯೋತ್ಸವ ಆಚರಣೆಗೆ ವಿವಿಧ ರೂಪುರೇಷೆ ಹಾಕಿಕೊಳ್ಳಲಾಗಿದೆ. ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗಿಯಾಗಿ ಆಚರಣೆ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದು ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್​ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅರಮನೆ ಆವರಣದಲ್ಲಿ ಧ್ವಜಾರೋಹಣ ಜರುಗಲಿದೆ. ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದರು.

ತಾಪಂ ಇಒ ಬಸವರಾಜ ಐನಾಪುರ, ಗ್ರೇಡ್​&2 ತಹಸೀಲ್ದಾರ್​ ಸಿದ್ಧಾರೂಢ ಬನ್ನಿಕೊಪ್ಪ, ಬಿಇಒ ಆರ್​.ಟಿ.ಬಳಿಗಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ, ಸಿಡಿಪಿಒ ಶಂಕರ ಕುಂಬಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಎಡಿಎಲ್​ಆರ್​ ಪ್ರಕಾಶ ಸತ್ತಿಗೇರಿ, ಪ್ರಕಾಶ ಮುಗಳಕೋಡ, ಪಿಎಸ್​ಐ ಸುನೀಲಕುಮಾರ ನಾಯಕ ಇತರರಿದ್ದರು. ಮುಖ್ಯಶಿಕ್ಷಕ ಪಿ.ಡಿ. ಕಾಲವಾಡ ನಿರೂಪಿಸಿದರು.