ಕನಕಗಿರಿ ತಾಲೂಕಿನ ನವಲಿಯಲ್ಲಿ ನೇಹಾ ಹಿರೇಮಠ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಂಚಯ್ಯ ಸ್ವಾಮಿ ಬಿದ್ನೂರಮಠ, ಮೃತ್ಯುಂಜಯ ಸ್ವಾಮಿ ಹಿರೇಮಠ, ಭೀಮನಗೌಡ ಹರ್ಲಾಪೂರ, ದುರುಗೇಶ ಭಜಂತ್ರಿ, ಯುವ ಮುಖಂಡರಾದ ವೀರೇಶ ಹರಿಜನ ಇತರರಿದ್ದರು. 
ಜಿಲ್ಲೆ

ಜನಪ್ರತಿನಿಧಿಗಳಿಂದ ಅಪ್ರಬುದ್ಧ ಹೇಳಿಕೆ

ರುದ್ರಪ್ಪ ವಾಲಿ

ಕನಕಗಿರಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಹಾಡ ಹಗಲೇ ಬರ್ಬರವಾಗಿ ಹತ್ಯೆಮಾಡಿರುವುದು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಹೇಳಿದರು.

ತಾಲೂಕಿನ ನವಲಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೇಹಾ ಹಿರೇಮಠ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಯುವತಿಯ ಕೊಲೆ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳ ಹೇಳಿಕೆಗಳು ಜವಾಬ್ದಾರಿಯಿಂದ ಕೂಡಿರದೆ ಅತ್ಯಂತ ಬಾಲಿಷ ಹಾಗೂ ಅಪ್ರಬುದ್ಧ ಹೇಳಿಕೆಗಳಾಗಿವೆ. ಇಂಥವರು ರಾಜ್ಯದ ಜನರಿಗೆ ಹೇಗೆ ಸುರಕ್ಷತೆ ನೀಡಬಲ್ಲರು. ಇಂಥ ಘಟನೆಗಳಿಂದ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಶಾಲೆ- ಕಾಲೇಜಿಗೆ ಹೋಗದ ವಾತಾವರಣ ನಿರ್ಮಾಣವಾಗಿದೆ. ನೇಹಾಳ ಕೊಂದವನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದರು.

ಪ್ರಮುಖರಾದ ಯಮನೂರ ಬುನ್ನಟ್ಟಿ, ಶಶಿಧರ ಸ್ವಾಮಿ ಸೋಮನಾಳ, ದುರುಗೇಶ ಹರಿಜನ, ರಾಮಣ್ಣ ಗಾಳಿ, ಹನುಮಂತ ಕಾರಟಗಿ, ಮಧು ಈಡಿಗೇರ, ಹೇಮನಗೌಡ, ಶಿವಯ್ಯ ಸ್ವಾಮಿ ನವಲಿ, ಸಂಗಮೇಶ ಅಂಗಡಿ, ಮಂಜುನಾಥ ಹರ್ಲಾಪುರ, ಗಿರಿಯಪ್ಪ ಕಲ್ಲೂರ, ಜಡಿಯಪ್ಪ ಉಪ್ಪಳ, ಜಡಿಸಿದ್ದಯ್ಯ ಸ್ವಾಮಿ ಇತರರಿದ್ದರು.