ಹುಳಿಯಾರು ಹೋಬಳಿಯ ವಳಗೆರೆಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಪಿಎಸ್​ಐ ಧಮಾರ್ಂಜಿ ಮಾತನಾಡಿದರು. ಮುಖ್ಯಶಿಕ್ಷಕ ಹೊನ್ನಪ್ಪ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ$್ಮ, ಶಿಕ್ಷಕ ರಾಮಚಂದ್ರ ಇದ್ದರು. 
ಜಿಲ್ಲೆ

ದೈಹಿಕ ಹಿಂಸೆಯಾದರೆ ದೂರು ನೀಡಿ

ತುಮಕೂರು ಡೆಸ್ಕ್

ಹುಳಿಯಾರು: ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ತೊಂದರೆ ಕೊಡುವವರು ಕಂಡು ಬಂದರೆ ತಕ್ಷಣವೇ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು ಎಂದು ಪಿಎಸ್​ಐ ಧಮಾರ್ಂಜಿ ತಿಳಿಸಿದರು.

ಹೋಬಳಿಯ ವಳಗೆರೆಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಜಿಎಲ್​ಪಿಎಸ್​ ಆಶ್ರಯದಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ವಿಶೇಷ ಕಾನೂನುಗಳಿವೆ. ಅವರಿಗೆ ಯಾರೂ ತೊಂದರೆ ನೀಡಬಾರದು. ಜತೆಗೆ ಕಿರುಕುಳ ನೀಡಬಾರದು. ಲೈಂಗಿಕ ಕಿರುಕುಳ ನೀಡಿದರೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಸಮಸ್ಯೆ ಕಂಡು ಬಂದಾಗ ಯಾವುದೇ ಗೊಂದಲಕ್ಕೆ ಒಳಗಾಗದೇ ಪೊಲೀಸ್​ ಠಾಣೆಗೆ ದೂರು ನೀಡಬೇಕು. ಬಾಲಕಿಯರು ಶಾಲೆಗೆ ಹೋಗುವ ಹಾಗೂ ಬರುವಾಗ ಯಾರಾದರೂ ತೊಂದರೆ ಕೊಡುವುದು ಹಾಗೂ ಚುಡಾಯಿಸುವುದು ಕಂಡು ಬಂದಲ್ಲಿ ಮಾಹಿತಿ ನೀಡಿ. ಪೊಲೀಸರಿಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು. ಬಾಲ್ಯವಿವಾಹವನ್ನು ತಡೆಗಟ್ಟಲು ಪಾಲಕರ ಜತೆಗೆ ಸಾರ್ವಜನಿಕರ ಸಹಕಾರ ಮುಖ್ಯ. ಬಾಲ್ಯವಿವಾಹ ಅಪರಾಧಕ್ಕೆ 2 ವರ್ಷಗಳವರೆಗೂ ಕಠಿಣ ಶಿಕ್ಷೆ ಹಾಗೂ 1 ಲಕ್ಷದವರೆಗೂ ದಂಡ ವಿಧಿಸುವ ಅವಕಾಶವಿದೆ. ಹೆಣ್ಣು ಮಕ್ಕಳಿಗೆ 18 ವರ್ಷದ ನಂತರವೇ ಮದುವೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಹೊನ್ನಪ್ಪ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ$್ಮ, ಶಿಕ್ಷಕ ರಾಮಚಂದ್ರ, ಪೊಲೀಸ್​ ಇಲಾಖೆಯ ಶಿವಕುಮಾರ್​, ಸರಸ್ವತಿ ಇದ್ದರು.