ತಿಕೋಟಾ ಪಟ್ಣಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ 71ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಆರ್​.ಎಂ. ಬಣಗಾರ ಮಾತನಾಡಿದರು. ಹರ್ಷಗೌಡ ಪಾಟೀಲ, ಭೀಮರಾವ ಹಂಗರಗಿ, ಸಂಗನಬಸಪ್ಪ ತಳೇವಾಡ ಮತ್ತಿತರರಿದ್ದಾರೆ. 
ಜಿಲ್ಲೆ

ಸಕಾಲದಲ್ಲಿ ಸಾಲ ಮರುಪಾವತಿಸಿ

ಗಿರೀಶ ಸಗರ

ವಿಜಯಪುರ: ಸಹಕಾರಿ ರಂಗದಲ್ಲಿ ವಿಜಯಪುರ ಜಿಲ್ಲೆಯೂ ಮುಂಚೂಣಿಯಲ್ಲಿದೆ ಎಂದು ವಿಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಆರ್​.ಎಂ. ಬಣಗಾರ ಹೇಳಿದರು.

ತಿಕೋಟಾ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಮಂಗಲ ಕಾರ್ಯಾಲಯದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್​, ಸಹಕಾರಿ ಇಲಾಖೆ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂ ನಿ., ತಿಕೋಟಾ ಹಾಗೂ ತಾಲೂಕಿನ ಎಲ್ಲ ಸಹಕಾರ ಸಂ ಮತ್ತು ಬ್ಯಾಂಕುಗಳು ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲಭಾರತ 71 ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಗಳಿಂದ ರೈತರಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡುವುದರೊಂದಿಗೆ ಸಕಾಲದಲ್ಲಿ ಮರುಪಾವತಿ ಮಾಡಿಸಿಕೊಂಡು ಪ್ರಗತಿಪಥದಲ್ಲಿವೆ ಎಂದು ಅವರು ತಿಳಿಸಿದರು.

ತಿಕೋಟಾ ಪಿಕೆಪಿಎಸ್​ ಅಧ್ಯಕ್ಷ ಭೀಮರಾವ ಹಂಗರಗಿ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್​ ಉಪಾಧ್ಯಕ್ಷ ಸಂಗನಬಸಪ್ಪ ತಳೇವಾಡ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಸಾಧನೆಗೈದ ತಿಕೋಟಾ ಹಾಗೂ ಮಮದಾಪೂರ ಪಿಕೆಪಿಎಸ್​ ಅಧ್ಯಕ್ಷ ಹಾಗೂ ಸಿಇಒ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರ ಯೂನಿಯನ್​ ನಿರ್ದೇಶಕ ಹರ್ಷಗೌಡ ಪಾಟೀಲ, ಆರ್​.ಎಂ. ತೋಟದ, ಹಾಜಿಲಾಲ ಕೊಟ್ಟಲಗಿ, ಬಸಯ್ಯ ವಿಭೂತಿ, ಎಂ.ಎಸ್​. ಜತ್ತಿ, ಎಸ್​.ಕೆ. ಭಾಗ್ಯಶ್ರೀ, ಎಸ್​.ಡಿ. ಮನಗೂಳಿ, ಎಸ್​.ಎನ್​. ಪಾಟೀಲ, ಮಹೇಶ ನಾರಾಯಣಪೂರ, ಸುರೇಶ ಕೋಟ್ಯಾಳ, ಜಗದೀಶ ಕೋರಿ, ಎಂ.ಎಸ್​. ಬಂಡಿ, ಸಾಹಿತಿ ಸೋಮಶೇಖರ ಜತ್ತಿ, ಫೀರಪ್ಪ ಕಣ್ಮೇಶ್ವರ ಮತ್ತಿತರರಿದ್ದರು.