ಗುಳೇದಗುಡ್ಡ ಹಾದಿ ಬಸವೇಶ್ವರ ದೇವಸ್ಥಾನ ರಥದ ದುರಸ್ತಿಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಅಧ್ಯಕ್ಷ ಅಶೋಕ ಹೆಗಡೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಬೆಣ್ಣಿ, ರಾಚಪ್ಪ ಅಣ್ಣಿಗೇರಿ ಇತರರಿದ್ದರು. 
ಜಿಲ್ಲೆ

ಹಾದಿಬಸವೇಶ್ವರ ರಥದ ದುರಸ್ತಿಗೆ ಚಾಲನೆ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಪಟ್ಟಣದ ಹಾದಿ ಬಸವೇಶ್ವರ ದೇವಸ್ಥಾನದ ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿ ದುರಸ್ತಿಗೆ ಚಾಲನೆ ನೀಡಲಾಯಿತು.

77 ವರ್ಷ ಹಳೆಯದಾದ ಹಾದಿಬಸವೇಶ್ವರ ದೇವಸ್ಥಾನ ರಥವನ್ನು ದೇಶಕ್ಕೆ ಸ್ವಾತಂತ್ರೃ ದೊರೆತ ದಿನದಂದು ಪ್ರಥಮ ಬಾರಿಗೆ ಎಳೆದಿದ್ದು ವಿಶೇಷವಾಗಿದೆ.

ದೇವಸ್ಥಾನದ ಅಧ್ಯಕ್ಷ ಅಶೋಕ ಹೆಗಡೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಬೆಣ್ಣಿ, ರಾಚಪ್ಪ ಅಣ್ಣಿಗೇರಿ, ಮಲ್ಲೇಶಪ್ಪ ಕೆಲೂಡಿ, ನೂರಂದಪ್ಪ ಮದ್ದಾನಿ, ಮುತ್ತಣ್ಣ ಲಗಳಿ, ವಿ.ಎಂ. ಗಾಣಿಗೇರ, ವಿರುಪಾಕ್ಷಪ್ಪ ಹೆಗಡೆ, ಹನುಮಂತಪ್ಪ ಹುನಗುಂದ, ಈರಣ್ಣ ಬಂಡಿವಡ್ಡರ, ಶಶಿಧರ ಉದ್ನೂರ, ಜಯರಾಜ ಡೊಳ್ಳಿ, ಬಸವರಾಜ ಹಟ್ಟಿ, ಸಂಗಪ್ಪ ಗುಡದಾರಿ ಮತ್ತಿತರರು ಇದ್ದರು.