ಲಿಂಗಸುಗೂರು: ನಾರಾಯಣಪುರ ಬಲದಂಡೆ ಕಾಲುವೆ ದುರಸ್ತಿ ಹಾಗೂ ವಿತರಣಾ ನಾಲೆಗಳ ಔಟ್‌ಲೆಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಬೇಗ ಮುಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಕಾಲುವೆಗೆ ನೀರು ಸ್ಥಗಿತಗೊಳಿಸಿ ಎರಡು ತಿಂಗಳಾಯಿತು. ಆದರೆ, ಈವರೆಗೆ ದುರಸ್ತಿ ಕಾರ್ಯ ಮುಗಿಸಿಲ್ಲ. ನೀರು ಹರಿಸುವ ಸಂದರ್ಭದಲ್ಲಿ ವಿತರಣಾ ನಾಲೆಗಳ ಗೇಟ್‌ಗಳ ಅಳವಡಿಕೆ, ಕಾಲುವೆ ರಿಪೇರಿ ಕಾರ್ಯ ನಡೆಸಿದ್ದಾರೆ.
ಇದರಿಂದ ರೈತರಿಗೆ ತೊಂದರೆಯಾಗಲಿದ್ದು, ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಸಂಘದ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ, ಪ್ರಧಾನ ಕಾರ್ಯದರ್ಶಿ ಬಸವರಾಜ ಗೌಡೂರು, ಭೀಮನಗೌಡ ಬೆಂಚಲದೊಡ್ಡಿ, ನಾಗಪ್ಪ ಪುಣೇದ್, ತಿಮ್ಮನಗೌಡ, ಮಹ್ಮದ ಖಾಜಾ ಹುಸೇನ್ ಇದ್ದರು.