ವಿಜಯಪುರ: ರೇಣುಕಾಚಾರ್ಯರ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆಯ ತತ್ವಗಳು ಇಂದಿನ ಸಮಾಜದ ಸಮಾನತೆ, ಧಾರ್ಮಿಕ ಸಮರತೆ ಮತ್ತು ಅಧ್ಯಾತ್ಮಿಕ ಪ್ರಗತಿಗೆ ದಾರಿದೀಪವಾಗಿವೆ ಎಂದು ಶಿಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಶೈವ ತತ್ವಶಾಸವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಜತೆಗೆ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣರು ಎಂದರು.
ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿ, ಋಷಿಗಳ ಜತೆಗೆ ನಿರಂತರ ಜ್ಞಾನಸಾಧನೆ ನಡೆಸಿದರು. ಅವರ ಬದುಕು ಮತ್ತು ತತ್ವಗಳು ಇಡೀ ವಿಶ್ವಕ್ಕೆ ಆದರ್ಶಪ್ರಾಯ. ಯುವಜನತೆ ಮಹನೀಯರ ಜೀವನ ಸಂದೇಶ, ತತ್ವಾನ ಅರ್ಥೈಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದ ರೇಣುಕಾಚಾರ್ಯರು ಅದರಲ್ಲಿ ಎಲ್ಲ ವರ್ಣಗಳು ಸಮಾನವೆಂಬ ನಂಬಿಕೆಯನ್ನು ಇಡೀ ವಿಶ್ವಕ್ಕೆ ಹರಡಿದರು ಎಂದರು. ಗ್ರಾಮದ ರಾಜು ಕತ್ನಳ್ಳಿ, ಪ್ರವಿಣ ಅರಕೇರಿ, ಆನಂದ ಗಂಗನಳ್ಳಿ ಮತ್ತಿತರರಿದ್ದರು.