ಜಿಲ್ಲೆ

ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾ ಸ್ವಾಮಿ ಪತ್ನಿ.. Renuka swamy Wife Blessed Baby Boy

ಬೆಂಗಳೂರು: ಪಟ್ಟಣಗೆರೆಯ ಶೆಡ್​ನಲ್ಲಿ ಬರ್ಬರವಾಗಿ ಹತ್ಯೆಯಾದ ರೇಣುಕಾಸ್ವಾಮಿ ( Renuka Swamy ) ಕೊಲೆ ಅವರ ಪತ್ನಿ ಗಂಡುಮಗುವಿಗೆ ಜನ್ಮ ( Renuka swamy Wife Blessed Baby Boy ) ನೀಡಿದ್ದಾರೆ. ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆ ಆಗಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಬರ್ಬರ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ಈ ಕೊಲೆ ಮಾಡಿದ್ದು ನಟ ದರ್ಶನ್ ಹಾಗೂ ಗ್ಯಾಂಗ್ ಎನ್ನುವ ಆರೋಪ ಇದೆ. ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇದೆ. ರೇಣುಕಾ ಸ್ವಾಮಿ ನಿಧನ ಹೊಂದುವಾಗ ಅವರ ಪತ್ನಿ ಸಹನಾಗೆ ಐದು ತಿಂಗಳು. ಈಗ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ದರ್ಶನ್ ಆಪ್ತ ಗೆಳತಿ ಪವಿತ್ರಾಗೆ ರೇಣುಕಾ ಸ್ವಾಮಿ ಫೇಕ್ ಖಾತೆ ಮೂಲಕ ಮೆಸೇಜ್ ಮಾಡಿದ್ದರು. ಈ ವಿಚಾರ ದರ್ಶನ್ ಅವರ ಕೋಪಕ್ಕೆ ಕಾರಣ ಆಗಿತ್ತು. ರೇಣುಕಾ ಸ್ವಾಮಿಯನ್ನು ಪತ್ತೆ ಹಚ್ಚಿಸಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್​ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆಯಿತು. ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇದೆ