ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಅವರ ಹಿರಿಯ ಸಹೋದರಿ ರೇಣುಕಾ ಕುರ್ತಕೋಟಿ (83) ವಯೋಸಹಜ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾದರು.
ಮೃತರು ಕೆನರಾ ಬ್ಯಾಂಕ್‌ನ ವಲಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಪತಿ ಲಿಂಗರಾಜ್ ಕುರ್ತಕೋಟಿ, ನಾಲ್ವರು ಹೆಣ್ಣು ಮಕ್ಕಳು, ಓರ್ವ ಪುತ್ರ, ಸಹೋದರ ಮಹೇಶ ಜೋಶಿ ಸೇರಿ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.