ಜಿಲ್ಲೆ

15ರಂದು ರೇಣುಕಾದೇವಿ ಮೂರ್ತಿ ಪ್ರತಿಷ್ಠಾಪನೆ

ಸೋಮಲಿಂಗ ತಳವಾರ

ಮಮದಾಪುರ: ಸಮೀಪದ ಕೊಳವಿ ಗ್ರಾಮದ ಭಜಂತ್ರಿ ಕಾಲನಿಯಲ್ಲಿ ಶ್ರೀ ರೇಣುಕಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆ.15ರಂದು ಬೆಳಗ್ಗೆ 6 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. 7ಕ್ಕೆ ಶ್ರೀ ಗೂಳಿ ಬಸವೇಶ್ವರ ದೇವಸ್ಥಾನದಿಂದ ಮಹಾ ಕುಂಭಮೇಳ, 8ಕ್ಕೆ ಜೋಗಮ್ಮರಿಗೆ ಹಡ್ಡಲಗಿ ತುಂಬುವ ಕಾರ್ಯಕ್ರಮ 10 ಗಂಟೆಗೆ ಮಹಾಪ್ರಸಾದ ಏರ್ಪಡಿಸಲಾಗಿದೆ.

ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ ಗ್ರಾಮದ ಶ್ರೀ ಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸಿ, ಸುಮಂಗಲೆಯರಿಂದ ಆರತಿ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಅರ್ಚಕ ಬಸಯ್ಯ ಹುಲಕಂತಿ, ಬಸವರಾಜ ಭಜಂತ್ರಿ, ಬೀರಪ್ಪ ಭಜಂತ್ರಿ, ಅಜಿತ ಭಜಂತ್ರಿ ಇತರರಿದ್ದರು.