ಮೇಖಳಿ ಗ್ರಾಮದಲ್ಲಿರುವ ಗ್ರಾಪಂ ಜಾಗವನ್ನು ನಿರುದ್ಯೋಗ ಯುವಕರು ಸ್ವಂತ ಉದ್ಯೋಗ ಕೈಗೊಳ್ಳಲು ನೀಡಬೇಕು ಎಂದು ಕಾರ್ಯದರ್ಶಿ ಬಿ.ಎಸ್.ಅವರಾದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ವಿರೂಪಾಕ್ಷ ಬಟನೂರೆ, ಮಾರುತಿ ನಾಯಿಕ, ವಸಂತ ಬಟನೂರೆ ಇತರರಿದ್ದರು. 
ಜಿಲ್ಲೆ

ಜಾಗ ಬಾಡಿಗೆ ನೀಡುವಂತೆ ಮನವಿ

ರಾಘವೇಂದ್ರಗೌಡ ಭೀ ಪಾಟೀಲ್

ಮೇಖಳಿ: ನಿರುದ್ಯೋಗಿ ಯುವಜನರು ಸ್ವಂತ ಉದ್ಯೋಗ ಕೈಗೊಳ್ಳಲು ಗ್ರಾಪಂ ವ್ಯಾಪ್ತಿಯ ಖಾಲಿ ಜಾಗ ಬಾಡಿಗೆ ನೀಡುವಂತೆ ಬುಧವಾರ ಗ್ರಾಮಸ್ಥರು ಗ್ರಾಪಂಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಸ್ವಂತ ಉದ್ಯೋಗ ಕೈಗೊಳ್ಳಬೇಕೆಂದರೆ ಜಾಗದ ಸಮಸ್ಯೆ ಎದುರಾಗಿದೆ. ಪಂಚಾಯಿತಿಗೆ ಸೇರಿದ ಜಾಗ ಖಾಲಿ ಇದೆ. ಅದರಲ್ಲಿ ಸ್ವಂತ ಉದ್ಯೋಗ ನಡೆಸಲು ಅವಕಾಶ ನೀಡಬೇಕು. ಬರುವ ಆದಾಯದಲ್ಲಿ ಪಂಚಾಯಿತಿಗೆ ಕರ ಕಟ್ಟುತ್ತೇವೆ. ಇದರಿಂದ ಪಂಚಾಯಿತಿ ಆದಾಯವೂ ಹೆಚ್ಚಲಿದೆ ಎಂದು ಮನವಿ ಮಾಡಿದರು.

ವಿರೂಪಾಕ್ಷ ಬಟನೂರೆ, ಮಾರುತಿ ನಾಯಿಕ, ವಸಂತ ಬಟನೂರೆ, ಬಸಪ್ಪ ಕಾಂಬಳೆ, ಶಿವನಾಯಿಕ ನಾಯಿಕ, ಗಜಾನನ ಮುತಾರೆ, ಚೇತನ ಪಾಟೀಲ, ಸದಾಶಿವ ಕಾಂಬಳೆ, ಸಂಜು ಘೇವಾರೆ ಇತರರಿದ್ದರು.