ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಭಾರಿ ಗಾತ್ರದ ಮರ ತೆರವು ಮಾಡುತ್ತಿರುವುದು ಸಹಾಯಕ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ ಸೇರಿ ಇತರರು ಇದ್ದರು. 
ಜಿಲ್ಲೆ

ಭಾರಿ ಗಾತ್ರದ ಒಣಗಿದ ಮರ ತೆರವು

ಎಂ.ರವಿ

ಸುಂಟಿಕೊಪ್ಪ: ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಖಾಸಗಿ ತೋಟವೊಂದರ ಭಾರಿ ಗಾತ್ರದ ಒಣಗಿದ ಮರವನ್ನು ಶುಕ್ರವಾರ ಅರಣ್ಯ ಇಲಾಖೆ ತೆರವುಗೊಳಿಸಿದೆ.

ಅರಣ್ಯ ಇಲಾಖೆಯ ಕುಶಾಲನಗರ ವಲಯಕ್ಕೆ ಸೇರಿದ ಸಹಾಯಕ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಭಾರೀ ಗಾತ್ರದ ಹೊನ್ನೆ ಮರವನ್ನು ಆನೆ ಕಾಡು ಅರಣ್ಯ ಮರ ಸಂಗ್ರಹಾಲಯಕ್ಕೆ ರವಾನಿಸಿದರು. ಕೊಡಗರಹಳ್ಳಿ ಕಂಬಿಬಾಣೆ ಸಂಪರ್ಕ ರಸ್ತೆಯ ಖಾಸಗಿ ಶಾಲೆ, ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಪ್ರೌಢಶಾಲೆ ಇದೆ. ಪ್ರತಿ ನಿತ್ಯ ಇದೇ ರಸ್ತೆಯಲ್ಲಿ ನೂರಾರು ಮಕ್ಕಳು ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಅಲ್ಲದೆ ಚಿಕ್ಲಿಹೊಳೆ ಸಂಪರ್ಕ ರಸ್ತೆ ಇದಾಗಿದ್ದು ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಒಣಗಿದ ಮರ ಯಾವಾಗ ಬೀಳುತ್ತೋ ಎಂಬ ಭಯದಲ್ಲೇ ಸಾರ್ವಜನಿಕರು ಓಡಾಡುವಂತಾಗಿತ್ತು. ಇದೀಗ ಭಾರಿ ಗಾತ್ರದ ಮರ ತೆರವು ಮಾಡಿದ್ದರಿಂದ ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.