ಕಂಪ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಗುಂತಕಲ್ ಸಂಚಾಲಕಿ ಶಕುಂತಲಾ ಅಕ್ಕ ಅವರು ಮಧುವನದ ರಕ್ಷಾಬಂಧನ ಬಿಡುಗಡೆಗೊಳಿಸಿದರು. ಸಂಚಾಲಕರಾದ ಸಕಲೇಶ್ವರಿ ಅಕ್ಕ, ರೇವತಿ ಅಕ್ಕ, ವಿದ್ಯಾರ್ಥಿಗಳಾದ ಶಾರದಾ, ಲಾವಣ್ಯ ಇತರರಿದ್ದರು. 
ಜಿಲ್ಲೆ

ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳಿ

ಕಂಪ್ಲಿ: ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಜಾಗೃತಿ ತೋರಬೇಕು ಎಂದು ಗುಂತಕಲ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಶಕುಂತಲಾ ಅಕ್ಕ ಹೇಳಿದರು.


ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಶುಕ್ರವಾರ ಮೌಂಟ್‌ಅಬುವಿನ ಮಧುಬನ ರವಾನಿಸಿದ ರಕ್ಷಾಬಂಧನ ಬಿಡುಗಡೆ ಮತ್ತು ರಕ್ಷಾಬಂಧನ ಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ಷಾಬಂಧನವು ಪರಮಾತ್ಮನ ಶ್ರೀರಕ್ಷೆಯ ಪ್ರತೀಕವಾಗಿದೆ. ದೈವಿ ಗುಣ ಸಂಪಾದನೆಗೆ ಪರಮಾತ್ಮನ ಸ್ಮರಣೆ, ಆರಾಧನೆ ಅಗತ್ಯ. ಇದರಿಂದ ಜೀವನದಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.


ಸ್ಥಳೀಯ ಈಶ್ವರೀಯ ವಿವಿ ಸಂಚಾಲಕಿ ಸಕಲೇಶ್ವರಿ ಅಕ್ಕ ಮಾತನಾಡಿ, ಸರ್ವ ಧರ್ಮದವರಿಗೂ ಒಬ್ಬನೇ ಪರಂಜ್ಯೋತಿ ಪರಮಾತ್ಮನಾಗಿದ್ದು, ಆತನ ಆರಾಧನೆಯಿಂದ ಆತ್ಮಬಲ ವೃದ್ಧಿಯಾಗಲಿದೆ ಎಂದು ತಿಳಿಸಿದರು.

ವಿವಿಯ ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಕಟ್ಟಲಾಯಿತು. ಹೊಸಪೇಟೆಯ ಈಶ್ವರೀಯ ವಿವಿಯ ರೇವತಿ ಅಕ್ಕ, ವಿದ್ಯಾರ್ಥಿಗಳಾದ ಶಾರದಾ, ಲಾವಣ್ಯ, ರೇಣುಕಾ, ವೆಂಕಟೇಶಸ್ವಾಮಿ ರೆಡ್ಡಿ, ಶ್ರೀನಿವಾಸರೆಡ್ಡಿ, ಟಿ.ಡಿ.ರುದ್ರಪ್ಪ, ರವಿಗೌಡ ಇತರರಿದ್ದರು.