ಶಿವರಾತ್ರಿ ಪ್ರಯುಕ್ತ ನೆವಟೂರು ಶ್ರೀ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಧರ್ಮಸಭೆಯನ್ನು ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀನಿವಾಸ, ಈಶ್ವರಪ್ಪಗೌಡ, ಭೈರಪ್ಪ, ರುದ್ರೇಶ ಇತರರಿದ್ದರು. 
ಜಿಲ್ಲೆ

ಶಿವನಾಮ ಸ್ಮರಣೆಯಿಂದ ಭಯ ದೂರ

ರಿಪ್ಪನ್‌ಪೇಟೆ: ಸಹನೆ ಮತ್ತು ಸೌಜನ್ಯಗಳಿಗೆ ವೆಚ್ಚವೇನೂ ಇಲ್ಲ. ಆದರೆ ಅವುಗಳಿಂದ ಎಲ್ಲವನ್ನು ಪಡೆಯಬಹುದೆಂದು ಮಳಲಿ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ನೆವಟೂರು ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿ, ಶಿವನಾಮ ಸ್ಮರಣೆ, ಶಿವಚಿಂತನೆ, ಮಾಡಿದರೆ ಯಾವ ಭಯವೂ ಇರುವುದಿಲ್ಲ. ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ. ಆದ್ದರಿಂದ ಶಿವನಾಮ ಸ್ಮರಣೆಯಲ್ಲಿ ಅತ್ಯಂತ ಹಾಗೂ ಅಪಾರವಾದ ಶಕ್ತಿಯಿದೆ ಎಂದರು. ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ, ಮುಖಂಡರಾದ ಈಶ್ವರಪ್ಪಗೌಡ, ಭೈರಪ್ಪ, ರುದ್ರೇಶ ಇತರರಿದ್ದರು.