ಗಜೇಂದ್ರಗಡ: ಪಟ್ಟಣದ ಸಮೀಪದ ಪುರ್ತಗೇರಿಯ ಸೈನಿಕ ನರದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬಿಜೆಪಿ ರೋಣ ಮಂಡಲದ ವತಿಯಿಂದ ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಸೈನಿಕ ನಗರದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಸೈನಿಕರನ್ನು ಸನ್ಮಾನಿಸಲಾಯಿತು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಮಾತನಾಡಿ, ತಮ್ಮ ಜೀವನದ ಕೌಟುಂಬಿಕ ಜವಾಬ್ದಾರಿಗಳನ್ನು ಮರೆತು ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಕಾರ್ಯ ತುಂಬಾ ಮಹತ್ವದ್ದಾಗಿದ್ದು ಗಡಿ ಕಾಯುವ ಯೋಧರಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಾಜಿ ಸೈನಿಕರಾದ ಎಲ್.ಎಂ. ಮುಧೋಳ, ಎಂ.ಎನ್. ವೈದ್ಯ, ಎಸ್.ವೈ. ಮೆದಾರ, ಎಚ್.ಬಿ. ಉಪ್ಪಾರ, ಎಸ್.ಬಿ. ಮಾರನಬಸರಿ, ಎಸ್.ಪಿ. ಕುರುಬನಾಳ, ಎಚ್. ಅಕ್ಬರಲಿಸಾಬ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚೌಹಾಣ, ಶಿವಾನಂದ ಮಠದ, ಬಾಲಾಜಿರಾವ್ ಬೋಸ್ಲೆ, ರಮೇಶ ವಕ್ಕರ, ಸಂತೋಷ ಕಡಿವಾಲ, ರಂಗನಾಥ ಮೇಟಿ, ಸಲೀಂ ಕಲಾದಗಿ, ದುರ್ಗಪ್ಪ ಕಟ್ಟಿಮನಿ, ಮಲ್ಲಪ್ಪ ಗೂಳಿ, ಸೂಗುರೇಶ ಕಾಜಗಾರ, ಕಳಕಪ್ಪ ರಾಠೋಡ ಇತರರು ಇದ್ದರು.