ಕೂಡ್ಲಿಗಿಯ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ಹುತಾತ್ಮರ ದಿನಾಚರಣೆ ನಿಮಿತ್ತ ಗಾಂಧಿಚಿತಾಭಸ್ಮಕ್ಕೆ ತಹಸೀಲ್ದಾರ್ ಎಂ.ರೇಣುಕಾ ಪುಷ್ಪ ನಮನ ಸಲ್ಲಿಸಿದರು. ಗ್ರೇಡ್-2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ಕೆ.ನರಸಪ್ಪ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ ಇತರರಿದ್ದರು. 
ಜಿಲ್ಲೆ

ಭಾರತದ ಸ್ವಾತಂತ್ರೃಕ್ಕೆ ಕಾರಣರಾದ ಗಾಂಧಿ ನೆನವು

ಕೂಡ್ಲಿಗಿ: ಭಾರತದ ಸ್ವಾತಂತ್ರೃಕ್ಕೆ ಕಾರಣರಾದ ಮಹಾತ್ಮ ಗಾಂಧಿ ಅವರನ್ನು ಯಾವಗಲೂ ನೆನಪುಮಾಡಿಕೊಳ್ಳತ್ತೆವೆ ಎಂದು ಮೊಳಕಾಲ್ಮೂರು ಸಪಪೂ ಕಾಲೇಜಿನ ಪ್ರಾಚಾರ್ಯ ಗೋವಿಂದಪ್ಪ ಹೇಳಿದರು.

ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ತಾಲೂಕು ಆಡಳಿತ ಹಾಗೂ ಗಾಂಧಿ ಸ್ಮಾರಕ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿ ಅವರು ನೀಡಿದ ಸಾಹಿತ್ಯ, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಿದ್ಧಾಂತಗಳು ಹಾಗೂ ವಿವಿಧ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಉಳಿದಿದ್ದಾರೆ. ಗಾಂಧಿ ಕೇವಲ ಭಾರತದಲ್ಲಿ ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದಾರೆ. ದೇಶದಲ್ಲಿದ್ದ ಬಡತನ, ದಾರಿದ್ರ್ಯ ಕಂಡು ತುಂಡು ಬಟ್ಟೆಯ ಪಕೀರನಾಗಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ನೆಡೆಸಿ ಸ್ವಾತಂತ್ರ್ಯ ತಂದುಕೋಟ್ಟಿದ್ದಾರೆ ಎಂದರು.

ಹುತಾತ್ಮರ ಗೌರವಾರ್ಥ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವಿಸಲಾಯಿತು. ನಂತರ ಭಗವದ್ಗೀತೆ, ಕುರಾನ್, ಬೈಬಲ್ ಮತ್ತು ಬೌದ್ದ ಧರ್ಮದ ಶಾಂತಿ ಸಂದೇಶ ಪಠಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗಲಿದ ದೇಶಪ್ರೇಮಿಗಳ ನೆನೆದು ಅಶ್ರುತರ್ಪಣೆ ಸಲ್ಲಿಸಲಾಯಿತು.

ತಹಸೀಲ್ದಾರ್ ಎಂ. ರೇಣುಕಾ, ಗ್ರೇಡ್-2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ಕೆ.ನರಸಪ್ಪ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ನಿಕಟಪೂರ್ವ ಅಧ್ಯಕ್ಷ ಪಿ.ಶಿವರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತಳವಾರ ಶರಣಪ್ಪ, ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಬಿಇಒ ಪದ್ಮನಾಭ ಕರಣಂ, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಸಪಪೂ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಜೆ.ವೆಂಕಟೇಶ, ಉಪಪ್ರಾಚಾರ್ಯ ಟಿ.ಬಸವರಾಜ, ನಿವೃತ್ತ ಇಒ ಜಿ.ಎಂ.ಬಸಣ್ಣ, ಪ್ರಜಾಪಿತ ಈಶ್ವರಿ ವಿವಿ ಸಂಚಾಲಕಿ ಶಶಿಕಲಾ ಅಕ್ಕಾ, ಪ್ರಮುಖರಾದ ಎ.ಎಂ.ರಾಘವೇಂದ್ರ, ಸಂದೀಪ್, ಜಿಲಾನ್, ಎಸ್.ವಿರುಪಾಕ್ಷ ಮೂರ್ತಿ, ಹಯವದನಚಾರ್, ಬ್ಯಾಳಿ ವಿಜಯಕುಮಾರ್ ಗೌಡ, ಬ್ಯಾಳಿ ಗೌರಮ್ಮ ಇತರರಿದ್ದರು.