ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಮಾನ್ವಿಯ ಹುತಾತ್ಮ ವೀರಯೋಧ ಮಂಜುನಾಥ ಅಂಗಡಿ ಸಾದಪುರ ಪುತ್ಥಳಿಗೆ ಮಾಜಿ ಯೋಧರು ಪುಷ್ಪನಮನ ಸಲ್ಲಿಸಿದರು. ಮಾಜಿ ಯೋಧರಾದ ಆಂಜನೇಯ ನಸ್ಲಾಪುರ, ಜೆಲ್ಲಿ ಆಂಜನೇಯ್ಯ ನೀರಮಾನ್ವಿ, ಹನುಮಂತ ಇತರರಿದ್ದರು. 
ಜಿಲ್ಲೆ

ಯೋಧರ ತ್ಯಾಗ, ಬಲಿದಾನ ಸ್ಮರಿಸಿ

Kopala - Desk - Eraveni

ಮಾನ್ವಿ: ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ 527 ಯೋಧರು ಹುತಾತ್ಮರಾದರು. ಆದ್ದರಿಂದ ಸೈನಿಕರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಮಾಜಿ ಯೋಧ ಆಂಜನೇಯ ನಸ್ಲಾಪುರ ಹೇಳಿದರು.

ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಮಾಜಿ ಯೋಧರು ಪಟ್ಟಣದ ರಾಯಚೂರು ರಸ್ತೆಯಲ್ಲಿನ ಹುತಾತ್ಮ ವೀರಯೋಧ ಮಂಜುನಾಥ ಅಂಗಡಿ ಸಾದಪುರ ಪುತ್ಥಳಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮಾನ್ವಿ-ಸಿರವಾರ ತಾಲೂಕಿನ ಕೇಂದ್ರೀಯ ಸಶಸ್ತ್ರ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ನಾಯಕ ಮುಷ್ಟೂರು, ಉಪನ್ಯಾಸಕರಾದ ಡಾ.ಹುಲಿಯಪ್ಪ ದುಮತಿ, ಅಂಬಣ್ಣ ನಾಯಕ ಉಮಳಿ ಹೊಸೂರ್, ಮಾಜಿ ಸೈನಿಕರಾದ ತಿಪ್ಪಣ್ಣ ಹರವಿ, ಜೆಲ್ಲಿ ಆಂಜನೇಯ್ಯ ನೀರಮಾನ್ವಿ, ಓಬಳೇಶ್ ನಾಯ್ಕ ಇತರರಿದ್ದರು.