ಚಿಕ್ಕಮಗಳೂರಿನ ನರ್ಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರ ಅಶ್ವಾಕುಲ್ಲಾ ಖಾನ್‌ರ ಫಲಕ ಅನಾವರಣಗೊಳಿಸಲಾಯಿತು. ಸಿಇಎನ್ ಇನ್ಸ್ಪೆಕ್ಟರ್ ಗವಿರಾಜ್, ಶಾಲೆಯ ಉಪಪ್ರಾಚಾರ್ಯೆ ನಜ್‌ಮುಶ್, ರಾಕೇಶ್, ತಸ್ಮಿಯಾ ಮತ್ತಿತರರಿದ್ದರು. 
ಜಿಲ್ಲೆ

ಇತಿಹಾಸದಲ್ಲಿ ಮರೆತ ಹೋರಾಟಗಾರರನ್ನು ಸ್ಮರಿಸಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ದೇಶದ ಇತಿಹಾಸ ಪುಟದಲ್ಲಿ ಮರೆತÀ ಸ್ವಾತಂತ್ರö್ಯ ಹೋರಾಟಗಾರರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲೆ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಗವಿರಾಜ್ ತಿಳಿಸಿದರು.

ನಗರದ ಬೈಪಾಸ್ ಸಮೀಪದ ನರ್ಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರ ಅಶ್ವಾಕುಲ್ಲಾ ಖಾನ್‌ರ ಫಲಕವನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಸ್ವಾತಂತ್ರö್ಯ ಪೂರ್ವದ ಮೊದಲು ಬ್ರಿಟಿಷರ ಆಳ್ವಿಕೆ ವಿರುದ್ಧ ಹೋರಾಡಿದವರ ನೆನಪು ಮರೆಯಾಗುತ್ತಿದೆ. ಕೇವಲ ಪಠ್ಯಪುಸ್ತಕದಲ್ಲಿ ಅಳವಡಿಸಿರುವ ಹೋರಾಟಗಾರರು ಮಾತ್ರ ಬಿಂಬಿತವಾಗುತ್ತಿದೆ. ಈ ನಡುವೆ ಎಲೆಮರೆ ಕಾಯಿಯಂತೆ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗಿಯಾದವರನ್ನು ಇಂದಿನ ಯುವಸಮೂಹ ಗುರುತಿಸಬೇಕು ಎಂದು ಹೇಳಿದರು.
ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ದಿನಗೊಬ್ಬರಂತೆ ಸ್ವಾತಂತ್ರö್ಯ ಹೋರಾಟಗಾರರ ಪರಿಚಯಿಸಲು ಶಾಲೆ ಆಸಕ್ತಿ ತೋರಿರುವುದು ಹೆಮ್ಮೆಯ ಸಂಗತಿ. ಇದರಿಂದ ಭವಿಷ್ಯದಲ್ಲಿ ಮಕ್ಕಳು ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ರವಾನಿಸಿ ದೇಶಕ್ಕಾಗಿ ಮಡಿದವರನ್ನು ನೆನಪಿಸಿಕೊಳ್ಳಲು ಸಹಕಾರಿ ಎಂದರು.
ಭಾರತ ಸ್ವಾತಂತ್ರö್ಯಗೊAಡು ೭೫ ವರ್ಷ ಪೂರೈಸಿದರೂ ಇಂದಿಗೂ ಇತಿಹಾಸದಲ್ಲಿ ಹೋರಾಡಿದ ಸೇನಾನಿಗಳ ಸ್ಮರಿಸುವ ಕಾರ್ಯವಾಗುತ್ತಿಲ್ಲ. ದೇಶದ ನಾಗರೀಕರಾದ ನಾವುಗಳು ನೆಮ್ಮದಿಯಿಂದ ಬದುಕಲು ಕಾರಣಕರ್ತರಾದ ಹೋರಾಟಗಾರರ ಇತಿಹಾಸ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಪ್ರಾಚಾರ್ಯೆ ಸುಪ್ರಿಯಾ ಮಾತನಾಡಿ, ಸ್ವಹಿತಾಸಕ್ತಿ ತೊರೆದು ದೇಶದ ಹಿತಾಸಕ್ತಿಗೆ ಜೀವವನ್ನೇ ಮುಡಿಪಿಟ್ಟ ಹೋರಾಟಗಾರರು ಎಂದಿಗೂ ಅಜಾರಾಮರ. ಆ ಸಾಲಿನಲ್ಲಿ ಅಶ್ವಾಕುಲ್ಲಾ ಖಾನ್ ಕೂಡಾ ಒಬ್ಬರು ಎಂದ ಅವರು ವಿದ್ಯಾರ್ಥಿಗಳು ಪ್ರತಿನಿತ್ಯ ಫಲಕದಲ್ಲಿ ಅಳವಡಿಸುವ ಹೋರಾಟಗಾರರ ಮಾಹಿತಿಯನ್ನು ಸಂಗ್ರಹಿಸಿ ಪಸರಿಸುವ ಕಾರ್ಯ ಮಾಡಬೇಕು ಎಂದರು.
ಮೂಲತಃ ಅಶ್ವಾಕುಲ್ಲಾಖಾನ್ ಮುಸ್ಲೀಂ ಧರ್ಮದ ಅನುಯಾಯಿಯಾದರೂ, ಬಹುತೇಕ ಚಂದ್ರ ಶೇಖರ್ ಆಜಾದ್ ಜೊತೆಯಲ್ಲಿ ಪರಸ್ಪರ ಅವಿನಾಭಾವ ಸಂಬAಧ ಹೊಂದಿದ್ದರು. ಬ್ರಿಟಿಷರ ಆಳ್ವಿಕೆ ವಿರುದ್ಧ ಸಿಡಿದೆದ್ದು ಸ್ವಾತಂತ್ರö್ಯಕ್ಕೆ ಹೋರಾಟ ರೂಪಿಸಿರುವ ಕಾರಣ ದೇಶವು ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಚಾರ್ಯೆ ನಜ್‌ಮುಶ್, ಆಡಳಿತ ವ್ಯವಸ್ಥಾಪಕ ರಾಕೇಶ್, ಸಿಬ್ಬಂದಿ ರಾಕೇಶ್, ತಸ್ಮಿಯಾ, ಪುಷ್ಪರಾಜ್ ಮತ್ತಿತರರಿದ್ದರು.