ಇಂಚಲ ಗ್ರಾಮದಲ್ಲಿ ಅಯೋಧ್ಯೆ ಶ್ರೀರಾಮನ ಮಂತ್ರಾಕ್ಷತೆಯನ್ನು ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ವಿತರಿಸಲಾಯಿತು. ಕಾರ್ತಿಕ ಮಲ್ಲೂರ, ನಾಗಪ್ಪ ಮೇಟಿ, ಸುರೇಶ ವಾರಿ ಇತರರು ಇದ್ದರು. 
ಜಿಲ್ಲೆ

ಭಕ್ತಿಯಿಂದ ರಾಮನನ್ನು ಸ್ಮರಿಸಲಿ

ಪ್ರಶಾಂತ ಹೂಗಾರ

ಬೈಲಹೊಂಗಲ: ಎಲ್ಲರ ಮನಸ್ಸಿನ ಭಕ್ತಿ- ಭಾವದ ಪ್ರತೀಕವಾದ ಭವ್ಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಹೆಮ್ಮೆಯ ಪ್ರತೀಕ. ಪ್ರತಿಯೊಬ್ಬ ರಾಮಭಕ್ತನು ಭಾರತದ ಅಧ್ಯಾತ್ಮ ಇತಿಹಾಸ ಜಗತ್ತಿಗೆ ಪಸರಿಸುವಂತೆ ಮಾಡಲಿ ಎಂದು ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಸಮೀಪದ ಸುಕ್ಷೇತ್ರ ಇಂಚಲದ ಗ್ರಾಮದಲ್ಲಿ ಶನಿವಾರ ಅಯೋಧ್ಯೆ ಶ್ರೀರಾಮನ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿ, ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿ ರಾಮನನ್ನು ಸ್ಮರಣೆ ಮಾಡಬೇಕು ಎಂದರು.

ಆಂಜನೇಯ ದೇವಸ್ಥಾನದಲ್ಲಿ ಪೂರ್ಣಾನಂದ ಭಾರತಿ ಸ್ವಾಮೀಜಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ವಿತರಣೆಗೆ ಚಾಲನೆ ನೀಡಿದರು. ಪುರಸಭೆ ಸದಸ್ಯ ಗುರು ಮೆಟಗುಡ್ಡ, ಯುವ ಮುಖಂಡ ಕಾರ್ತಿಕ ಮಲ್ಲೂರ, ಸಮಾಜ ಸೇವಕ ನಾಗಪ್ಪ ಮೇಟಿ, ಸುರೇಶ ವಾರಿ, ಮಹಾಂತೇಶ ಬಾಗೇವಾಡಿ, ಮಲ್ಲಿಕಾರ್ಜುನ ಗಂಗಾಳದ, ಭರಮನಾಯ್ಕ ಮಲ್ಲೂರ, ಪ್ರಕಾಶ ಕರಿಗಾರ, ಶಿವಾನಂದ ಪೂಜಾರಿ, ಮತ್ಯುಂಜಯ ಹಿರೇಮಠ, ಎಸ್.ಎಸ್. ಮೆಟಗಟ್ಟಿ, ಶಿವಾನಂದ ಹಿರೇಮಠ, ಮಲ್ಲಿಕಾರ್ಜುನ ಗುರವಣ್ಣವರ ಇತರರಿದ್ದರು.