ಜಿಲ್ಲೆ

ಮನುವಾದವನ್ನು ಅಂಬೇಡ್ಕರ್ ಸುಟ್ಟಿದ್ದು ನೆನಪಿರಲಿ

Davangere - Desk - Mahesh Babu E

ಚಿತ್ರದುರ್ಗ: ನ್ಯಾಯ, ಸಮಾನತೆ, ಸ್ವಾತಂತ್ರೃದಲ್ಲಿ ನಂಬಿಕೆ ಹೊಂದಿರುವ ಧರ್ಮಗಳನ್ನು ಗೌರವಿಸುವುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ.ಮಹಾದೇವಪ್ಪ ತಿಳಿಸಿದರು.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವರು, ಅಂಬೇಡ್ಕರ್ ಯಾಕೆ ಮನುವಾದವನ್ನು ಸುಟ್ಟು ಹಾಕಿದರು.? ಲಾರ್ಡ್ ಮೆಕಾಲೆ ಮುನ್ನ ಎಲ್ಲರಿಗೂ ಶಿಕ್ಷಣ ಸಿಗದಂತೆ ನೋಡಿಕೊಂಡಿದ್ದವರು ಯಾರು ಎಂದು ಪ್ರಶ್ನೀಸಿದರು.

ಯಾವ ಧರ್ಮ ಮನುಷ್ಯನ ಅವನತಿಗೆ ಕಾರಣವಾಗುವುದೋ ಅಂಥದ್ದನ್ನು ಕಟ್ಟಿಕೊಂಡು ಏನು ಮಾಡಬೇಕು? ಎಂದು ಪ್ರತಿಕ್ರಿಯಿಸಿದರು.