ಕಂಪ್ಲಿ: ರಾಜ್ಯಪಾಲರು ವಿರೋಧ ಪಕ್ಷದ ನಾಯಕರನ್ನು ಮೀರಿಸಿದ್ದಾರೆ. ಬಿಜೆಪಿಗೆ ವಿರೋಧ ಪಕ್ಷದ ನಾಯಕರ ಅವಶ್ಯಕವೇ ಇಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ವ್ಯಂಗ್ಯವಾಡಿದರು.
ಇದನ್ನೂ ಓದಿ: ಗದಗ 26ನೇ ವಾರ್ಡನಲ್ಲಿ ವಿವಿದ ಕಾಮಗಾರಿಗೆ ಭೂಮಿಪೂಜೆ
ಇಲ್ಲಿನ ಎಪಿಎಂಸಿ ಬಳಿಯಲ್ಲಿ ಕೆ.ಕೆ.ಆರ್.ಡಿ.ಬಿ 5ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಅಭಿಯೋಜನೆಗೆ ಅನುಮತಿ ನೀಡುವಲ್ಲಿ ರಾಜ್ಯಪಾಲರು ತಾರತಮ್ಯ ಎಸಗಿಸಿದ್ದು, ಮಾಜಿ ಸಿಎಂ, ಮಾಜಿ ಸಚಿವರ ವಿರುದ್ಧ ತನಿಖೆಗೂ ಅನುಮತಿ ನೀಡಿಲ್ಲ ಎಕೆ? ರಾಜ್ಯಪಾಲರ ಕಚೇರಿಯೇ ಬಿಜೆಪಿ ಕಚೇರಿ ಆಗಿದೆ ಎಂದು ರಾಜ್ಯಪಾಲರ ವಿರುದ್ಧ ಹರಿಹಾಯ್ದರು.
ಉತ್ತಮ ಮಳೆಯಾಗಿದ್ದು, ಮಳೆ ರಭಸಕ್ಕೆ ಬೆಳೆ ಜಲಾವೃತವಾಗಿದೆ. ಸಮೀಕ್ಷೆ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ವಿಚಾರದಲ್ಲಿ ತಡೆಯಾಜ್ಞೆ ದೊರಕುವ ಸಾಧ್ಯತೆಯಿದ್ದು,
ಈಗಾಗಲೇ ಪ್ರಕಟಿಸಿದ ಮೀಸಲಾತಿನಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದೆ. ಅವಕಾಶ ಸಿಕ್ಕರೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಸಿ ಉಳಿದ ಅವಧಿಗೆ ಕಾಂಗ್ರೆಸ್ ಅಧಿಕಾರ ನಡೆಸಲಿದೆ ಎಂದರು.
ಪ್ರಮುಖರಾದ ಎಂ.ಸುಧೀರ್, ಡಾ.ಎ.ಸಿ.ದಾನಪ್ಪ, ಶರಣಬಸವ, ಡಿ.ಮೌನೇಶ, ಗದ್ಗಿ ವಿರುಪಾಕ್ಷಿ, ಕೆ.ಕೃಷ್ಣ, ವಾಲ್ಮೀಕಿ ರಘುನಾಯಕ, ಹೊನ್ನೂರಪ್ಪ, ಡೆಕೋರೆಟರ್ ನಾಗರಾಜ, ಎಸ್.ಚಂದ್ರಶೇಖರಗೌಡ, ಜಿ.ಸುಧಾಕರ ಇತರರಿದ್ದರು.