ಹನುಮಸಾಗರದ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಲಲಿತಾ ಸಹಸ್ರನಾಮ ಪಠಣ ಮಾಡಲಾಯಿತು. ಪ್ರಮುಖರಾದ ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ವತ್ಸಲಾ ಸಿನ್ನೂರ, ವಿದ್ಯಾ ಸಪ್ಪಂಡಿ, ಸುನಂದಾ ಮೆದಿಕೇರಿ, ರೂಪಾ ಯರಗಲ್ಲ, ವಿಜಯಾ ಕಾಳಗಿ, ಸುಮಾ ಸಿನ್ನೂರ, ಗಂಗಮ್ಮ ಹುಲಮನಿ, ಶಿಲ್ಪಾ ಸಿನ್ನೂರ, ಸರಸ್ವತಿ ಸಿನ್ನೂರ, ವಿಜಯಲಕ್ಷ್ಮೀ ಕಾಳಗಿ, ಲಕ್ಷ್ಮೀ ಸಿನ್ನೂರ, ರಂಜಿತಾ ಹುಲಮನಿ, ಸವಿತಾ ಸಿನ್ನೂರ ಇತರರಿದ್ದರು. 
ಜಿಲ್ಲೆ

ಲಲಿತ ಸಹಸ್ರನಾಮ ಪಠಣದಿಂದ ದೋಷಪರಿಹಾರ

ಗಾಯತ್ರಿ ಮಾಲಿಪಾಟೀಲ್

ಹನುಮಸಾಗರ: ನಿರಂತರ ಲಲಿತ ಸಹಸ್ರನಾಮ ಪಠಣ ಮಾಡುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಉತ್ತಮ ಆರೋಗ್ಯ ದೊರೆಯಲಿದೆ ಎಂದು ಪ್ರವಚನಕಾರ ಶಿವಶಂಕರ ಮೆದಿಕೇರಿ ಹೇಳಿದರು.

ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಪಠಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಲಿತಾ ಸಹಸ್ರನಾಮ ಪಠಣದಿಂದ ರೋಗಗಳು ಗುಣವಾಗುತ್ತವೆ. ಜೀವನದಲ್ಲಿ ಸುಖ-ನೆಮ್ಮದಿ ನೆಲೆಸಲಿದೆ. ದೈಹಿಕ-ಮಾನಸಿಕ ಆರೋಗ್ಯ ಸುಧಾರಣೆ, ಆರ್ಥಿಕ ಸ್ಥಿತಿ ವೃದ್ಧಿ, ದೇವಿ ಆಶೀರ್ವಾದ ಹಾಗೂ ಗ್ರಹದೋಷ ಪರಿಹಾರವಾಗಲಿದೆ. ಪ್ರತಿದಿನ ಭಕ್ತಿಯಿಂದ ಪಠಿಸುವುದು, ವಿಶೇಷವಾಗಿ ದಿನನಿತ್ಯ ಪಠಣಕ್ಕೆ ಮಹತ್ವವಿದ್ದು, ಇಷ್ಟಾರ್ಥಗಳನ್ನು ನೆನಪಿಸಿಕೊಂಡು ಪಠಿಸಿದರೆ ಉತ್ತಮ ಫಲ ದೊರೆಯಲಿದೆ ಎಂದರು.

ದೇವಾಂಗ ಸಮುದಾಯದ ಸ್ಥಳೀಯ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ಪ್ರಮುಖರಾದ ಹನಮಂತಗೌಡ ಸಿನ್ನೂರ, ರಾಮಣ್ಣ ಸಿನ್ನೂರ, ಶಂಕ್ರಪ್ಪ ಸಂಪ್ಪಡಿ, ಅಶೋಕ ಸಿನ್ನೂರ, ನಾರಾಯಣಪ್ಪ ಹುಲಮನಿ, ಮಂಜುನಾಥ ಸಿನ್ನೂರ, ಕುಡ್ಲೆಪ್ಪ ಸಿನ್ನೂರ, ಶಂಕ್ರಪ್ಪ ಹುಲಮನಿ, ವಸಂತ ಸಿನ್ನೂರ, ಮಹೇಶ ಹುಲಮನಿ, ರಮೇಶ ಶೀಲವಂತರ ಇತರರಿದ್ದರು.