ಮದ್ದೂರು ತಾಲೂಕಿನ ವೈದ್ಯನಾಥಪುರ ಕದಂಬ ಜಂಗಮ ಮಠದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಎಸ್. ನಾಗರಾಜು ಮಾತನಾಡಿದರು. ಶ್ರೀ ರೇಣುಕಾಚಾರ್ಯ ಸ್ವಾಮಿಜಿ, ಡಿ.ದ್ಯಾವಣ್ಣ, ಎಚ್.ಬಿ.ಸ್ವಾಮಿ, ದೇವಣ್ಣ ಇದ್ದರು. 
ಜಿಲ್ಲೆ

ವೈದ್ಯನಾಥಪುರದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ

ಲೋಕೇಶ್ ಮನು. ಡಿ

ಮದ್ದೂರು: ಮಂಡ್ಯ ನಗರದ ವಿ.ವಿ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ನಿಯಮಿತದಿಂದ ತಾಲೂಕಿನ ವೈದ್ಯನಾಥಪುರ ಕದಂಬ ಜಂಗಮ ಮಠದ ಸಭಾಂಗಣದಲ್ಲಿ ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮದ ಧಾರ್ಮಿಕ ಹಾಗೂ 156ನೇ ಆಧ್ಯಾತ್ಮಿಕ ಕಾರ್ಯಕ್ರಮ ಶನಿವಾರ ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮ ಮಠದ ಶ್ರೀ ರೇಣುಕಾಚಾರ್ಯ ಸ್ವಾಮಿಜಿಗಳ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣ ಅವರ ವಚನಗಳು ಪ್ರಾಣ ಇದ್ದಂತೆ. ಅವುಗಳೆಲ್ಲ ಸಂರಕ್ಷಿಸುವ ಹೊಣೆಯು ನಮ್ಮದಾಗಿರುತ್ತದೆ. ನಮ್ಮ ಜೀವನದ ನಡೆಗೆ ಪ್ರೇರಣೆ ಕೊಡುವ ಏಕೈಕ ಧರ್ಮವೆಂದರೆ ಅದು ಬಸವ ಧರ್ಮ ಮಾತ್ರ ಎಂದು ತಿಳಿಸಿದರು.

ಯಾರು ಬಸವ ಧರ್ಮದಂತೆ ನಡೆದುಕೊಳ್ಳುತ್ತಾರೊ ಅವರೆಲ್ಲರನ್ನು ಸಹ ಈ ಧರ್ಮವು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಎಸ್. ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣ ಮೌಲ್ಯಯುತವಾದ ವಚನಗಳನ್ನು ಶಿಕ್ಷಣಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಅವರ ವಚನಗಳನ್ನು ಮನೆಗಳಲ್ಲಿ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರೆಲ್ಲರಿಗೂ ಬೋಧಿಸುವುದು ಅವಶ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರ ಪತ್ತಿನ ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಮದ್ದೂರು ತಾಲೂಕಿನ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಸ್ವಾಮಿ, ಉಪಾಧ್ಯಕ್ಷ ದೇವಣ್ಣ, ಹಿರಿಯ ಮುಖಂಡರಾದ ದೇವನೂರು ಜಗದೀಶ್, ರುದ್ರಸ್ವಾಮಿ, ಕೆಂಪಯ್ಯ, ಮಹಾದೇವಸ್ವಾಮಿ, ಮಹೇಶ್, ಮಧುಸೂದನ್, ಶಿವಕುಮಾರ್, ಮೋಹನ್, ಬಸವರಾಜಪ್ಪ ಇದ್ದರು.