ಕಾರ್ಪಾಡಿ ದೇವಳದಲ್ಲಿ ಸುಬ್ರಹ್ಮಣ್ಯ ಶ್ರೀ ಆಶೀರ್ವಚನ ನೀಡಿದರು. ಶಾಸಕ ಅಶೋಕ್ ಕುಮಾರ್ ರೈ, ಭಾಸ್ಕರ ಆಚಾರ್ ಹಿಂದಾರ್, ಬೂಡಿಯಾರ್ ರಾಧಾಕೃಷ್ಣ ರೈ ಮೊದಲಾದವರಿದ್ದರು. 
ಜಿಲ್ಲೆ

ದೇವರ ಮೇಲೆ ಅಚಲ ನಂಬಿಕೆಯಿದ್ದರೆ ಧರ್ಮದ ಉಳಿವು ಸಾಧ್ಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಸಮಾಜದಲ್ಲಿ ನಿಯತ್ತಿನಲ್ಲಿ ಬದುಕುವ ಸಲುವಾಗಿ ಧರ್ಮವನ್ನು ತಂದಿದ್ದಾರೆ. ದೇವರಲ್ಲಿ ನಂಬಿಕೆ ಇದ್ದರೆ ಮಾತ್ರ ಧರ್ಮ ಉಳಿಯಬಹುದು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಸೋಮವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಉದ್ಘಾಟಿಸಿದರು. ವಕೀಲ ಮಹೇಶ್ ಕಜೆ, ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ಅಮ್ಟಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಬಡಾಜೆಗುತ್ತು, ಬನ್ನೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿದರು.

ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ, ಮುರಳೀಧರ ಭಟ್ ಅಯೋಧ್ಯೆ ಮುಂಡೂರು, ಉದ್ಯಮಿ ಜಯಕುಮಾರ್ ನಾಯರ್, ಕುಂಜಾರು ಮದಗ ಶ್ರೀ ಜನಾರ್ದನ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರಕರೆ ಉಪಸ್ಥಿತರಿದ್ದರು.

ಯತೀಂದ್ರನಾಥ ಶಿವಗಿರಿ ಆರ್ಯಾಪು, ಅರ್ಚಕ ಅನಂತಯ್ಯ ಕಾರಂತ, ದೈವ ನರ್ತಕ ನೇಮು ಪರವ ಮಾಡಾವು ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿದರು. ದೇವಯ್ಯ ಗೌಡ ದೇವಸ್ಯ, ಧನಂಜಯ ಮೇರ್ಲ, ಸುರೇಶ್ ಕಬ್ಬಿನಹಿತ್ತಿಲು, ಶ್ರೀಧರ ರೈ ಮೇರ್ಲ, ಆನಂದ ಕೊಟ್ಲಾರು, ಸಂತೋಷ್ ರೈ ತೊಟ್ಲ, ಗಂಗಾಧರ ಕಲ್ಕೋಟೆ, ಅಭಿಲಾಷ್ ರೈ ಬಂಗಾರಡ್ಕ, ಯಶೋಧರ ಗೌಡ, ನಾಗರಾಜ ನಡುಮನೆ, ಪ್ರಜ್ವಲ್ ರೈ ತೊಟ್ಲ, ವಿಜಯ ಬಿ.ಎಸ್ ಗೌರವಿಸಿದರು. ಉದಯ ಕುಮಾರ್ ರೈ ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು.

ಇಂದಿನ ಕಾರ್ಯಕ್ರಮ

ಬೆಳಗ್ಗೆ 7ಗಂಟೆಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ರಿಂದ ಭಕ್ತಿ-ಭಾವ-ಸಂಗಮ, ಸಂಜೆ 6ಗಂಟೆಯಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 9ರಿಂದ ಪುತ್ತೂರಿನ ಬಾಲವನ ‘ಸಾಯಿ ಕಲಾ ಯಕ್ಷ ಬಳಗ’ದಿಂದ ಯಕ್ಷಗಾನ ನಡೆಯುವುದು. ಸಂಜೆ 7ಗಂಟೆಗೆ ಕಾಣಿಯೂರು ಶ್ರೀ ಆಶೀರ್ವಚನ ನೀಡುವರು.

ಹಲವು ಕಡೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಕಲಶ ಆಗುತ್ತಿದೆ. ಆದರೆ ಸರ್ಕಾರದ ಮೂಲಕ ನಡೆಯುವ ವ್ಯವಸ್ಥಾಪನಾ ಸಮಿತಿಯಲ್ಲಿ ದೇವಸ್ಥಾನದ ಮುಖ ನೋಡದವರನ್ನು ಆಯ್ಕೆ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನಕ್ಕೆ ಕುಂದಾಗುತ್ತಿದೆ. ದೇವಳಗಳು ರಾಜಕೀಯ ರಹಿತವಾಗಿರಬೇಕು. -ಭಾಸ್ಕರ ಆಚಾರ್ ಹಿಂದಾರ್ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಸಂಚಾಲಕ
ಕ್ಷೇತ್ರಕ್ಕೆ ಈಗಾಗಲೇ 10 ಲಕ್ಷ ರೂ. ಅನುದಾನ ನೀಡಲಾಗಿದೆ. ರಸ್ತೆ, ಸೇತುವೆಗೆ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು ಅದನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು. ಬ್ರಹ್ಮಕಲಶೋತ್ಸವದ ಅನ್ನದಾನಕ್ಕೆ 1 ಲಕ್ಷ ರೂ. ದೇಣಿಗೆ ನೀಡಿರುವೆ. -ಅಶೋಕ್ ಕುಮಾರ್ ರೈ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ https://www.vijayavani.net/first-meeting-of-janajagruthi-vedike-financial-year https://www.vijayavani.net/ravishankar-mijar