ಜಿಲ್ಲೆ

ಜಿಗಳಿಕೊಪ್ಪದಲ್ಲಿ ಧಾರ್ಮಿಕ ಕಾರ್ಯಕ್ರಮ 12ರಿಂದ

ವೀರೇಶ ಸೌದ್ರಿ

ಅಕ್ಕಿಆಲೂರ: ಜಿಗಳಿಕೊಪ್ಪದ ಶ್ರೀ ಆಂಜನೇಯ ದೇವಸ್ಥಾನ ಉದ್ಘಾಟನೆ ಸಮಾರಂಭ ಫೆ. 12ರಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಫೆ. 12ರಿಂದ 22ವರೆಗೆ ಜರುಗಲಿರುವ ಜಿಗಳಿಕೊಪ್ಪ ಆಂಜನೇಯ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾನೆ ಸಮಾರಂಭದ ವೇದಿಕೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎದುರು ಮುಖವಿರುವ ವಿಶೇಷ ಆಂಜನೇಯನಿಗೆ ರಾಜ್ಯದ ಎಲ್ಲೆಡೆ ಭಕ್ತಗಣವಿದೆ. 12 ರಿಂದ 21ರವರೆಗೆ ಗಡಿಗೌಡಗಾಂವ ಹಾವಗಿಲಿಂಗೇಶ್ವರ ಸಂಸ್ಥಾನಮಠದ ಶಾಂತವೀರ ಶಿವಾಚಾರ್ಯ ಶ್ರೀಗಳಿಂದ ನಿತ್ಯ ಸಂಜೆ 6 ರಿಂದ ಪ್ರವಚನ ಜರುಗಲಿದೆ. 21 ಮತ್ತು 22ರಂದು ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ ಎಂದರು.

ಸದಾಶಿವ ಬೆಲ್ಲದ ಮಾತನಾಡಿ, ಸಮಾರಂಭವನ್ನಾಗಿ ಅಚ್ಚುಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ 10ಕ್ಕೂ ಅಧಿಕ ಸಮಿತಿ ರಚಿಸಲಾಗಿದೆ ಎಂದರು.

ದೇವಸ್ಥಾನ ಕಮಿಟಿ ಅಧ್ಯಕ್ಷ ಶರತ್ ಸಣ್ಣವೀರಪ್ಪನವರ, ರಾಜಣ್ಣ ಗೌಳಿ, ಕುಮಾರ ದೇಶಮುಖ, ಲಕ್ಷ್ಮಣ ಹೊನ್ನಣ್ಣನವರ, ಉದಯ ವಿರುಪಣ್ಣನವರ, ರಂಗನಾಥ ದಾಸರ, ಪವನ ಜಾಬೀನ, ಶಿವಯೋಗಿ ಪಾಟೀಲ, ಅರುಣ ಸವಣೂರ, ವಿಜಯಕುಮಾರ ಪರಶಿಕ್ಯಾತಿ, ಶ್ರೀನಿವಾಸ ಸವಣೂರ, ವೀರೇಶ ನೆಲುವಿಗಿ, ಶಿವಯೋಗಿ ನೆಲ್ಲಿಕೊಪ್ಪ, ದಿನೇಶ ಪರಶಿಕ್ಯಾತಿ, ವಿ.ಎಚ್. ಪೂಜಾರ ಇತರರು ಇದ್ದರು.