ಜಿಲ್ಲೆ

ಧಾರ್ಮಿಕ ಆಚರಣೆಗೆ ಸಹಕಾರ ಅಗತ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ಕಟಕೋಳ: ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಶಾಂತಿ, ಸೌರ್ಹಾದದಿಂದ ಹಬ್ಬ ಆಚರಿಸಬೇಕು. ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಹಕಾರ ಅಗತ್ಯ ಎಂದು ಸಿಪಿಐ ವಿನಾಯಕ ಬಡಿಗೇರ ಎಂದರು.

ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಬಕ್ರೀದ್​ ಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ತಳಹದಿಯ ಮೇಲೆ ಎಲ್ಲ ಸಮುದಾಯದವರು ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಅಹಿತಕರ ಟನೆಗಳಿಗೆ ಆಸ್ಪದ ನೀಡಬಾರದು ಎಂದರು.

ಎಸ್​.ಎ.ಶೆಟ್ಟಿಸದಾವರ್ತಿ, ಎಸ್​.ಎನ್​.ಸಿಂಗಾರಗೊಪ್ಪ, ಎಸ್​.ಎಸ್​.ಢವಣ, ಸುಪ್ರೀತ್​ ಪಾಟೀಲ, ಮಲ್ಲನಗೌಡ ಸುರಗ, ಸರಪರಾಜ ಸಿ.ಬಿ., ದಾವಲಸಾಬ ಪೈಲ್ವಾನ, ಅಕ್ಬರ್​ ಮುಲ್ಲಾ, ಅಪರಾಧ ವಿಭಾಗದ ಪಿಎಸ್​ಐ ಎಂ.ಎಸ್​.ಬಡಿಗೇರ ಇತರರಿದ್ದರು. ಪಿಎಸ್​ಐ ಬಸವರಾಜ ಕೊಣ್ಣುರೆ ಸ್ವಾಗತಿಸಿದರು.