ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ರಾಷ್ಟ್ರಹಿತಕ್ಕಾಗಿ ತಮ್ಮ ಜೀವನ ಮುಡಿಪಾಗಿರಿಸಿದ್ದಾರೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು 82 ಸಂವತ್ಸರಗಳನ್ನು ಪೂರೈಸಿರುವ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥ ಆಯೋಜಿಸಲಾಗಿದ್ದ ರಾಷ್ಟ್ರವಿಜಯ ಯಜ್ಞದ ಅಂಗವಾಗಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಚೆನ್ನಕೇಶವ ದೀಕ್ಷಿತ್ ಮತ್ತೂರು, ಆರೆಸ್ಸೆಸ್ ಮುಖಂಡ ಸುರೇಶ್ ಜೋಷಿ, ಮಂಗೇಶ್ ಭೇಂಡೆ, ಒ.ಕೆ.ಮೋಹನನ್, ರವೀಂದ್ರ ಜೋಶಿ, ಪ್ರಭಾಕರ ಭಟ್ ಕಲ್ಲಡ್ಕ, ಕೆ.ಕೆ.ಬಲರಾಂ, ಸೀತಾರಾಮ ಕೆದಿಲಾಯ, ವಾಮನ ಶೆಣೈ, ನಿರ್ಮಲ್ ಕುಮಾರ್, ತಿಪ್ಪೆ ಸ್ವಾಮಿ, ಬಿ.ನಾಗರಾಜ್, ದಿನೇಶ್, ಜಗದೀಶ್, ವೆಂಕಟರಮಣ್, ಕೃಷ್ಣ ಪ್ರಸಾದ್ ಬದಿ, ರಾಮಚಂದ್ರ ಭಟ್ ಕೋಟೆ ಮನೆ, ಎ.ಸಿ.ಗೋಪಿನಾಥ್, ಕ್ಯಾ.ಗಣೇಶ್ ಕಾರ್ಣಿಕ್, ಪ್ರತಾಪ್‌ಸಿಂಹ ನಾಯಕ್, ಕೆ.ಸುರೇಂದ್ರನ್, ಕೆ.ಶ್ರೀಕಾಂತ್, ಎಂ.ಎಲ್.ಅಶ್ವಿನಿ, ರವೀಶ್ ತಂತ್ರಿ ಕುಂಟಾರು, ಭರತ್ ಶೆಟ್ಟಿ, ರಾಜೇಶ್ ನಾಕ್, ಹರೀಶ್ ಪೂಂಜ, ಸುನೀಲ್ ಕುಮಾರ್ ಕಾರ್ಕಳ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಅಂಕಣಕಾರ ದು.ಗು.ಲಕ್ಷ್ಮಣ ಮೊದಲಾದವರು ಪಾಲ್ಗೊಂಡಿದ್ದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಲಕ್ಷ್ಮೀ ದಂಪತಿಯನ್ನು ಅಭಿನಂದಿಸಲಾಯಿತು. ಶೌರಿ ಭಟ್ ಟಿ. ರಾಷ್ಟ್ರಗೀತೆ ಹಾಡಿದರು. ರಾಷ್ಟ್ರವಿಜಯ ಯಜ್ಞ ಸಮಿತಿ ಪೆರ್ಲ ಗೌರವಾಧ್ಯಕ್ಷ ರಾಜಾರಾಮ ಪೆರ್ಲ ಸ್ವಾಗತಿಸಿದರು. ಲೋಕೇಶ್ ಜೋಡುಕಲ್ಲು ಸಂದ ಪ್ರಮುಖರನ್ನು ಪರಿಚಯಿಸಿದರು. ಶ್ರೀಧರ ಭಟ್ ಸಜಂಗದ್ದೆ ನೇತೃತ್ವದಲ್ಲಿ ಪವಮಾನ ಹೋಮ, ಮಧ್ಯಾಹ್ನ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ ನಡೆಯಿತು. ರಾಮಕೃಷ್ಣ ಭಟ್ ಕಜಂಪಾಡಿ ವಂದಿಸಿದರು.
ಭಾರತ ಹಿಂದು ಧರ್ಮ ಆಧಾರಿತ ದೇಶ. ದೇಶದ ಏಕತೆ ಮತ್ತು ಅಖಂಡತೆಗೆ ನಾವು ಕಟಿಬದ್ಧರಾಗಬೇಕು. ಸಂಸ್ಥೆಗಳು ಸಮಾಜವನ್ನು ಕಟ್ಟಿದರೆ ಸಂಘ ದೇಶವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಯೋಗಾಶ್ರಮ https://www.vijayavani.net/sexual-assault-2 https://www.vijayavani.net/sexual-assault-3