ಕಬ್ಬಿನಾಲೆಯಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ.  
ಜಿಲ್ಲೆ

ಕಬ್ಬಿನಾಲೆಯಲ್ಲಿ ಧಾರ್ಮಿಕ ಪ್ರವಚನ

ಇಂದಿರಾ ಎನ್ ಕೆ

ಹೆಬ್ರಿ: ಕಬ್ಬಿನಾಲೆಯ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕೆಳಮಠ ಕಬ್ಬಿನಾಲೆಯ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ನಿವೃತ್ತ ರೇಷ್ಮೆ ಅಧಿಕಾರಿ ಶ್ರೀಧರ ಹೆಬ್ಬಾಳ ಧಾರ್ಮಿಕ ಪ್ರವಚನ ನೀಡಿದರು. ಸುಬ್ರಹ್ಮಣ್ಯ ಕಂಗಿನಾಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಅರ್ಚಕ ಲಕ್ಷ್ಮೀಶ ಭಾರದ್ವಾಜ್, ಪ್ರಮುಖರಾದ ಚಂದ್ರಶೇಖರ ಬಾಯಾರಿ, ಜಗದೀಶ ಪೂಜಾರಿ, ವನಿತಾ ಎನ್.ರಾವ್, ಸತೀಶ, ಪಲ್ಲವಿ ಎಸ್.ಹೆಬ್ಬಾರ್ ಇದ್ದರು. ಸೀತಾರಾಮ್ ಹೆಬ್ಬಾರ್ ನಿರೂಪಿಸಿದರು.