ರಾಯಬಾಗ: ಪ್ರಪಂಚದಲ್ಲಿ ಸುಖ, ಶಾಂತಿ, ನೆಮ್ಮದಿ ಲಭಿಸಬೇಕಾದರೆ ಸತ್ಸಂಗ, ದಾನ ಧರ್ಮದಂತಹ ಪುಣ್ಯದ ಕಾರ್ಯಗಳು ನಡೆಸಬೇಕು ಎಂದು ಬಂಡಿಗಣಿ ಚಕ್ರವರ್ತಿ ಅನ್ನದಾನೇಶ್ವ ಶ್ರೀಗಳು ಹೇಳಿದರು.
ಗುರುವಾರ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಪಾರಮಾರ್ಥಿಕ ಸಪ್ತಾಹದಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಮಾಧವಾನಂದರಂತಹ ಸಮರ್ಥ ಸದ್ಗುರನನ್ನು ನಂಬಿ ನಡೆದರೆ ಬಂದ ಕಷ್ಟಗಳು ಸುಲಭವಾಗಿ ತೋಲಗಿ, ಜೀವನ ಸುಖಮಯವಾಗುತ್ತದೆ. ಜ್ಞಾನದ ಕಣ್ಣಿನಿಂದ ನೋಡಿದಾಗ ಮಾತ್ರ ಪರಮಾತ್ಮ ಕಾಣುವನು ಎಂದರು.
ಭೆಂಡವಾಡದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟದಲ್ಲಿ ನಡೆಸಿದ ಜ್ಞಾನದಾಸೋಹ ಮತ್ತು ಅನ್ನದಾಸೋಹ ಕಾರ್ಯವನ್ನು ಇಂದು ಬಂಡಿಗಣಿ ದಾನೇಶ್ವರ ಶ್ರೀಗಳು ನಡೆಸುತ್ತಿದ್ದಾರೆ. ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಆಧ್ಯಾತ್ಮಿಕ ಮಾರ್ಗದ ಅರಿವು ಮೂಡಿಸುವುದುರಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಶಾಂತಮ್ಮತಾಯಿ ಬಿಲಕುಂದಿ, ನಭೀಸಾಬ ಮುಲ್ಲಾ, ಮಾರುತಿ ಶರಣರು, ತಾ.ಪಂ. ಸದಸ್ಯ ಮಹಾದೇವ ಮಾರಾಪುರ, ಮದಗೊಂಡ ಪೂಜೇರಿ, ಸಿದ್ದಪ್ಪ ಜೊಕ್ಕಾನಟ್ಟಿ, ಚನ್ನಪ್ಪ ಮಗದುಮ್ಮ, ಗಂಗಪ್ಪ ಪಾಲಭಾಂವಿ, ಕೆಂಪಣ್ಣ ಜೊಕ್ಕಾನಟ್ಟಿ ಇತರರು ಉಪಸ್ಥಿತರಿದ್ದರು.