ತೇರದಾಳದ ಬುದ್ಧವಿಹಾರದಲ್ಲಿ ಹಮ್ಮಿಕೊಂಡಿದ್ದ 2569 ನೇ ಬುದ್ಧಜಯಂತಿ ಕಾರ್ಯಕ್ರಮದಲ್ಲಿ ಪ್ರಜ್ಞಾ ಬೋಧಿ ಬಂತೇಜಿ ಆಶೀರ್ವಚನ ನೀಡಿದರು. ಪಿ.ಎಸ್. ಮಾಸ್ತಿ, ಆನಂದ ನಡುವಿನಕೇರಿ, ಸದಾಶಿವ ಶಿಂಗೆ, ಬಾಳು ಬುರುಡ, ಮಂಜು ಸರಿಕರ, ಹಣಮಂತ ಜಗದಮನಿ, ತುಕಾರಾಮ ಶಿಂಗೆ ಮತ್ತಿತರರಿದ್ದರು. 
ಜಿಲ್ಲೆ

ಧರ್ಮಗಳು ಶಾಂತಿ-ಸಾಮರಸ್ಯದ ಸಂಕೇತ

ತೇರದಾಳ: ಭಗವಾನ ಬುದ್ಧ ವಿಶ್ವದಲ್ಲಿ ಶಾಂತಿ ಸಂದೇಶ ಸಾರಿ, ವಿಶ್ವದಲ್ಲಿರುವ ಎಲ್ಲ ಧರ್ಮಗಳಿಗೆ ಮೂಲ ಆಧಾರವಾಗುವಂತಹ ಬೋಧನೆಗಳನ್ನು ಪ್ರತಿಪಾದಿಸಿದವರು. ಹೀಗಿರುವಾಗ ಧರ್ಮದ ಹೆಸರು ಬಳಸಿ ಜೀವ ತೆಗೆದರೆ ಧರ್ಮವಾದಿತೇ? ಮನುಷ್ಯರ ನಡುವೆ ತಾರತಮ್ಯವೇಕೆ ಎಂದು ತಕ್ಷಶೀಲಾ ಬುದ್ಧವಿಹಾರ ಇಂಟರ್‌ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಧಂತ ಪ್ರಜ್ಞಾ ಬೋಧಿ ಬಂತೇಜಿ ಹೇಳಿದರು.

ಬುದ್ಧ ಪೂರ್ಣಿಮಾ ಅಂಗವಾಗಿ ಇತ್ತೀಚೆಗೆ ಪಟ್ಟಣದ ಬುದ್ಧವಿಹಾರದಲ್ಲಿ ಹಮ್ಮಿಕೊಂಡಿದ್ದ 2569ನೇ ಬುದ್ಧಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಯಾವ ಧರ್ಮದಲ್ಲೂ ಕೊಲ್ಲು ಎಂಬ ಸಂದೇಶವಿಲ್ಲ. ಎಲ್ಲ ಧರ್ಮಗಳ ಸಾರ ಮನುಷ್ಯರನ್ನು ಮನುಷ್ಯರಂತೆ ನೋಡುವುದಾಗಿದೆ. ಆದರೆ, ನಾವು ನಮ್ಮ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಅಧರ್ಮದ ದಾರಿ ಹಿಡಿಯುತಲಿದ್ದೇವೆ. ಗೌತಮ ಬುದ್ಧರ ಸಂದೇಶಗಳು ಇಂದು ಜಗತ್ತಿಗೆ ಬೇಕಿವೆ. ಅವನ್ನು ಅಳವಡಿಸಿಕೊಂಡು ಮನುಷ್ಯ ಧರ್ಮ ಪಾಲಿಸಬೇಕಿದೆ ಎಂದರು.

ಪಿ.ಎಸ್. ಮಾಸ್ತಿ, ಆನಂದ ನಡುವಿನಕೇರಿ, ಸದಾಶಿವ ಶಿಂಗೆ, ಬಾಳು ಬುರುಡ, ಮಂಜು ಸರಿಕರ, ಹಣಮಂತ ಜಗದಮನಿ, ತುಕಾರಾಮ ಶಿಂಗೆ ಮತ್ತಿತರರಿದ್ದರು.