ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್ ಪ್ರವಚನ ಸ್ವಾಗತ ಸಮಿತಿ ಪ್ರಥಮ ಸಭೆಯಲ್ಲಿ ಸಮಿತಿಯ ಕೋಶಾಧ್ಯಕ್ಷ ಎಂ.ಆರ್.ಬೇಗ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ, ಸಮಿತಿ ಅಧ್ಯಕ್ಷ ಎಸ್.ಶರಣೇಗೌಡ, ಗೌರವಾಧ್ಯಕ್ಷ ಕೆ.ಜಿಲಾನಿ ಪಾಷಾ, ಪ್ರಮುಖರಾದ ಸೈಯದ್ ಜಾಫರ್‌ಅಲಿ ಜಾಗೀರದಾರ್, ಕೆ.ಮರಿಯಪ ್ಪ ಇತರರಿದ್ದರು. 
ಜಿಲ್ಲೆ

ಧರ್ಮಗ್ರಂಥಗಳಲ್ಲಿ ಮಾನವೀಯತೆ ಪ್ರತಿಪಾದನೆ

ಸಿಂಧನೂರು: ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಮೇ 8ರಿಂದ 11ರವರೆಗೆ ಸಾರ್ವಜನಿಕ ಕುರಾನ್ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಚನ ಸಮಿತಿ ಕೋಶಾಧ್ಯಕ್ಷ ಎಂ.ಆರ್.ಬೇಗ್ ಹೇಳಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್ ಪ್ರವಚನ ಸ್ವಾಗತ ಸಮಿತಿ ಪ್ರಥಮ ಸಭೆಯಲ್ಲಿ ಮಾತನಾಡಿದರು. ಎಲ್ಲ ಧರ್ಮಗಳ ಸಾರ ಒಂದೇ. ಎಲ್ಲವೂ ಮನುಷ್ಯತ್ವ ಹಾಗೂ ಮಾನವೀಯತೆ ಪ್ರತಿಪಾದಿಸಿವೆ. ವೇದ, ಪುರಾಣ, ಭಗವದ್ಗೀತೆ, ಕುರಾನ್, ಬೈಬಲ್ ಪವಿತ್ರ ಗ್ರಂಥಗಳನ್ನು ಮಾನವೀಯತೆ ನೆಲೆಗಟ್ಟಿನಲ್ಲಿ ರಚಿಸಲಾಗಿದೆ. ಅನ್ಯ ಧರ್ಮ ಹಾಗೂ ಧರ್ಮೀಯರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದರು.

ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹುಸೇನಸಾಬ್ ಮಾತನಾಡಿ, ಈಗಾಗಲೇ ಸ್ವಾಗತ ಸಮಿತಿ ಸೇರಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿಯಲ್ಲಿ ಶಾಸಕರು, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಪತ್ರಕರ್ತರು ಇದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ, ಸಮಿತಿ ಅಧ್ಯಕ್ಷ ಎಸ್.ಶರಣೇಗೌಡ, ಗೌರವಾಧ್ಯಕ್ಷ ಕೆ.ಜಿಲಾನಿ ಪಾಷಾ, ಪ್ರಮುಖರಾದ ಸೈಯದ್ ಜಾಫರ್‌ಅಲಿ ಜಾಗೀರದಾರ್, ಕೆ.ಮರಿಯಪ ್ಪ, ಎನ್.ಶಿವನಗೌಡ, ಅಲ್ಲಮಪ್ರಭು ಪೂಜಾರ್, ಸ್ವಾಗತ ಸಮಿತಿ ಸದಸ್ಯರಾದ ಎಂ.ಡಿ.ನದೀಮಮುಲ್ಲಾ, ಪ್ರಹ್ಲಾದಗುಡಿ ವಕೀಲ, ಸೈಯದ್ ಹಾರೂನ್‌ಪಾಷಾ ಜಾಗೀರದಾರ್, ಆಬೀದ್ ಖಾದ್ರಿ, ಶಫೀವುಲ್ಲಾ ಖಾನ್, ನಾಗರಾಜ ಸಜ್ಜನ, ಹುಸೇನಪ್ಪ ಅಮರಾಪುರ ಇದ್ದರು.