BASAVAJAYA MRITNUJAYA SWAMIJI 
ಜಿಲ್ಲೆ

ಮೀಸಲು ಹೋರಾಟ ಮುಂದುವರಿಕೆ:ಬಸವಜಯ ಮೃತ್ಯುಂಜಯ ಸ್ವಾಮೀಜಿ

RELIGION-BASAVAJAYA MRITNUJAYA SWAMIJI-KOPPAL-PANCHAMSALI

ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಾಡಲಾಗುವುದೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಮ್ಮ ಹೋರಾಟಕ್ಕೆ ಬಿಜೆಪಿ ಸರ್ಕಾರ 2ಡಿ ಮೀಸಲು ನೀಡಿದೆ. ಈಗಿನ ಸರ್ಕಾರಕ್ಕೆ 2ಎ ಮೀಸಲು ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಈ ಸಂಬಂಧ ಹೋರಾಟ ಮುಂದುವರಿಸಲು ಸಮುದಾಯ ಮುಖಂಡರೊಡನೆ ಚರ್ಚಿಸಲಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಜತೆಗೆ ಸಮುದಾಯದ ಶಾಸಕರು, ಪ್ರಮುಖರು ಚರ್ಚಿಸಿದ್ದಾರೆ. ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಬೆಳಗಾವಿ ಸುವರ್ಣಸೌಧದಲ್ಲಿ ಲಿಂಗಪೂಜೆ ಮೂಲಕ ಪ್ರತಿಭಟಿಸಲಾಗುವುದು. ಹಿಂದುಳಿದ ವರ್ಗಗಳ ಕಾಂತರಾಜ ವರದಿ ಅನುಷ್ಠಾನ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ನಮ್ಮ ಸಮುದಾಯದ ವರದಿ ಸರ್ಕಾರದ ಮುಂದಿದ್ದು, ನಮಗೆ ಮೀಸಲು ಕಲ್ಪಿಸಬೇಕು. ಹಾಲುಮತ ಸಮುದಾಯವನ್ನು ಎಸ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದಕ್ಕೆ ಖುಷಿ ಇದೆ. ಅದರಂತೆ ಲಿಂಗಾಯತ ಸಮುದಾಯಗಳನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

ಸಮುದಾಯ ಮುಖಂಡರಾದ ಬಸವನಗೌಡ ತೊಂಡಿಹಾಳ, ಕರಿಯಪ್ಪ ಮೇಟಿ, ಮಂಜುಳಾ ಕರಡಿ, ಗೀತಾ ಪಾಟೀಲ್, ಬಸವರಾಜ ಇಂದರಗಿ ಇತರರಿದ್ದರು.