filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಧರ್ಮ ಜಾಗೃತಿ ಸಾರುವ ಜಾತ್ರೆ

ತಲ್ಲೂರ: ಸಮಾಜದಲ್ಲಿ ನಡೆಯುವ ಮಠ&ಮಂದಿರಗಳ ಜಾತ್ರೆ ಹಾಗೂ ಉತ್ಸವಗಳು ಧರ್ಮ ಜಾಗೃತಿ ಸಂದೇಶ ಸಾರುತ್ತವೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ವಿಠ್ಠಲ&ರುಕ್ಮಿಣಿ ಜಾತ್ರಾಮಹೋತ್ಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮರು ಹಾಗೂ ಸಂತರ ತತ್ತ$್ವ, ಸಿದ್ಧಾಂತಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದು ತಿಳಿಸಿದರು.

ಗಂಗಪ್ಪ ಮಹಾರಾಜರು ಮಾತನಾಡಿದರು. ಬೆಳಗ್ಗೆ ಭಜನೆ, ಕೀರ್ತನೆ, ಪ್ರವಚನ, ರಾಮಜಪ, ಹರಿಪಾಠ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗ ದೇವರ ದಿಂಡಿ ಹಾಗೂ ಪಲ್ಲಕ್ಕಿ ಉತ್ಸವ ಸಂಚರಿಸಿತು. ಪಿಕೆಪಿಎಸ್​ ಅಧ್ಯ ಬಾಬು ಪರಾಸಿ, ಮುಖಂಡ ಗೌಡಪ್ಪ ಕಡಕೊಳ, ರೈನಾಪುರದ ಬಸಪ್ಪ ಮಹಾರಾಜರು, ಸೋಮನಿಂಗಪ್ಪ ಮಹಾರಾಜರು, ಅರ್ಚಕ ಗಂಗಾಧರ ಬಡಿಗೇರ, ದುರಗಪ್ಪ ಮಾದರ, ಬಸವರಾಜ ಹಳೇಮನಿ, ಅಜ್ಜಪ್ಪ ಹಲಗಲಿ, ಪುಂಡಲೀಕ ಭೀರಾಜನವರ, ಕೀರಪ್ಪ ಚುಳಕೇರಿ, ಮಹಾದೇವ ಪವಡೆಪ್ಪನವರ, ಮಾರುತಿ ಕೊಪ್ಪದ, ಪ್ರಹ್ಲಾದ ಬಡಿಗೇರ ಇತರರಿದ್ದರು.