ಜಿಲ್ಲೆ

ಮಾತೆಯರಿಂದ ಸಮಾಜದಲ್ಲಿ ಧರ್ಮ ಜಾಗೃತಿ

ಮಂಜೇಶ್ವರ: ಹೆಣ್ಣು ಛಲ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ದೇವರಿಗೆ ಸಮ. ಸವಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ. ತಾಯಿಯಲ್ಲಿರುವ ಎಲ್ಲ ಗುಣ ನಡತೆ ಮಕ್ಕಳಲ್ಲಿ ಸಂಸ್ಕಾರ ಮೂಡಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಮಾತಾನಂದಮಯೀ ನುಡಿದರು.

ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಸಂತಡ್ಕ ವಾಡದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರಂಭದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ವಾತೃ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ತಾಯಿ ಎಂದರೆ ಪಾವಿತ್ರ್ಯ, ಅವರಲ್ಲಿ ಸಂಸ್ಕಾರ, ಆಧ್ಯಾತ್ಮಿಕ ಚಿಂತನೆ ಮನೆ ವಾಡಿದೆ. ಅದನ್ನು ಅರಿತು ಮಕ್ಕಳು ಮುಂದುವರಿದರೆ ಜೀವನ ಪಾವನವಾಗುತ್ತದೆ ಎಂದರು.

ಪಾರ್ವತಿ ಶ್ರೀಧರ ಭಟ್ ವಾವೆ ಸವಾರಂಭದ ಅಧ್ಯಕ್ಷತೆ ವಹಿಸಿದ್ದರು. ದೈಗೋಳಿ ಸಾಯಿನಿಕೇತನ ಸೇವಾಶ್ರಮದ ಡಾ.ಶಾರದಾ ಉದಯ ಕುವಾರ್, ನಿವೃತ ಶಿಕ್ಷಕಿ ಜಯಲಕ್ಷ್ಮೀ ಕಾರಂತ, ವಿಶ್ವ ಹಿಂದು ಪರಿಷತ್ ಮಾತೃಶಕ್ತಿ ಕಣ್ಣೂರು ವಿಭಾಗ ಸಂಯೋಜಕಿ ಮೀರಾ ಆಳ್ವ, ನಿವೃತ್ತ ಶಿಕ್ಷಕಿ ಯಮುನಾ ಎ.ಕುಂಬಳೆ, ಮೀನಾಕ್ಷಿ ಸಿ.ಕೆ.ಚಿಪ್ಪಾರ್ ಲಾಲ್‌ಭಾಗ್, ರತ್ನಾವತಿ ಎಸ್.ಭಂಡಾರಿ ದಡ್ಡಂಗಡಿ ಉಪಸ್ಥಿತರಿದ್ದರು.

ವಿಶ್ವ ಹಿಂದು ಪರಿಷತ್ ವಾತೃ ಮಂಡಳಿ ಸಂತಡ್ಕದ ಕಾರ್ಯದರ್ಶಿ ಆಶಾಲತಾ ಸ್ವಾಗತಿಸಿದರು. ಅದ್ವಿತಾ ಸಂತಡ್ಕ ಪ್ರಾರ್ಥನೆ ಹಾಡಿದರು. ಯಶ್ವಿತಾ ಉದಯ ಶೆಟ್ಟಿ ಹಾಗೂ ಅಕ್ಷತಾ ಅಶೋಕ್ ಶೆಟ್ಟಿ ನಿರೂಪಿಸಿದರು. ಅರ್ಪಿತಾ ರೈ ಸಂತಡ್ಕ ವಂದಿಸಿದರು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಸಂತಡ್ಕ ಶ್ರೀ ಅರಸು ಸಂಕಲ ಸೇವಾ ಬಳಗ ಪ್ರಾಯೋಜಕತ್ವದಲ್ಲಿ ‘ಚಾ ಪರ್ಕ ಕಲಾವಿದೆರ್ ಕುಡ್ಲ ತಂಡದಿಂದ ಏರ್ಲಾ ಗ್ಯಾರಂಟಿ ಅತ್ತ್ ತುಳು ನಾಟಕ ಪ್ರದರ್ಶನಗೊಂಡಿತು.