ಜಿಲ್ಲೆ

ರಾ.ಹೆ 66ರಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ, ಕೂಳೂರು ಸೇತುವೆಯಲ್ಲಿ ತುರ್ತು ಕಾಮಗಾರಿ ಪೂರ್ಣ- ಸುಗಮ ಸಮಚಾರಕ್ಕೆ ವ್ಯವಸ್ಥೆ

Mangaluru - Shravan Kumar Nala

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬುಧವಾರ ತುರ್ತು ಕಾಮಗಾರಿ ಹಮ್ಮಿಕೊಂಡ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಗುರುವಾರ ರಾ.ಹೆ 66ರಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ ಸಿಕ್ಕಿದೆ. ಬುಧವಾರ ರಾತ್ರಿಯೇ ತುರ್ತು ಕಾಮಗಾರಿ ಪೂರ್ಣಗೊಂಡಿದ್ದು, ಎನ್‌ಎಚ್‌ಎಐನಿಂದ ಸುಗಮ ಸಮಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪಣಂಬೂರಿನಿಂದ ಮಂಗಳೂರಿಗೆ ಆಗಮಿಸುವ ಭಾಗದಲ್ಲಿ ಕೂಳೂರು ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಆ.19ರಿಂದ ಜಿಲ್ಲಾಧಿಕಾರಿಗಳು ವಾಹನ ಸಂಚಾರ ನಿಷೇಧಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶನದಂತೆ ತುರ್ತು ಕಾಮಗಾರಿ ನಡೆಸಿದ ಎನ್‌ಎಚ್‌ಎಐ, ಏಕಾಏಕಿ ಕೂಳೂರು ಸೇರುವೆ ಸೇರಿದಂತೆ ಕೂಳೂರು, ಕೊಟ್ಟಾರ ಸುತ್ತಮುತ್ತ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

*ಕಾಮಗಾರಿ ಪೂರ್ಣ- ಸುಗಮ ಸಮಚಾರ

ಬುಧವಾರ ಬೆಳಗ್ಗೆ ದುರಸ್ತಿಗೆ ಬೇಕಾದ ಕಚ್ಚಾವಸ್ತುಗಳು ಬಂದಿರುವುದರಿಂದ ಮಧ್ಯಾಹ್ನದಿಂದಲೇ ಕಾಮಗಾರಿ ಆರಂಭಿಸಿದ್ದೇ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು. ರಾತ್ರಿ 8 ಗಂಟೆ ವೇಳೆ ಕಾಮಗಾರಿ ಪೂರ್ಣಗೊಳಿಸಿದ ಎನ್‌ಎಚ್‌ಎಐ 2 ಸೇತುವೆಯಲ್ಲೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಗುರುವಾರ ಎಂದಿನಂತೆ ಟ್ರಾಪಿಕ್ ಜ್ಯಾಂ ರಹಿತ ಸಂಚಾರ ಈಬಾರದಲ್ಲಿ ಕಂಡುಬಂದಿದೆ.

--------------

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ತುರ್ತು ರಸ್ತೆ ಕಾಮಗಾರಿ ಹಮ್ಮಿಕೊಂಡಿದ್ದು, ಈವೇಳೆ ಟ್ರಾಪಿಕ್ ಜ್ಯಾಮ್ ಆಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಕಾಮಗಾರಿಯನ್ನು ರಾತ್ರಿ 8ರೊಳಗೆ ಪೂರ್ಣಗೊಳಿಸಿ ನಂತರ ಸುಗಮಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಬ್ದುಲ್ ಜಾವೇದ್ ಅಝ್‌ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರದ ಕಾರ್ಯಕಾರಿ ನಿರ್ದೇಶಕ