ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಬೈಂದೂರು ಉತ್ಸವ-2024 ಪೋಸ್ಟರನ್ನು ಶಾಸಕ ಗುರುರಾಜ್ ಗಂಟಿಹೊಳೆ ಬಿಡುಗಡೆಗೊಳಿಸಿದರು.  
ಜಿಲ್ಲೆ

ಅಭಿವೃದ್ಧಿ ಅವಕಾಶಗಳ ಕಲ್ಪನೆಯಲ್ಲಿ ಕ್ಷೇತ್ರದ ಕನಸು

ಇಂದಿರಾ ಎನ್ ಕೆ

ಬೈಂದೂರು: ಬೈಂದೂರು ಉತ್ಸವ ಕ್ಷೇತ್ರದ ಅಭಿವೃದ್ಧಿ ಅವಕಾಶಗಳ ಕಲ್ಪನೆಯಲ್ಲಿ ಕಂಡ ಕನಸು. ಒಂದೇ ಬಾರಿ ಎಲ್ಲವೂ ಸಾಕಾರಗೊಳಿಸುವ ತರಾತುರಿ ನಮ್ಮದಲ್ಲ ಬದಲಾಗಿ ಈ ವರ್ಷ ಆರಂಭವಾದರೆ ಹಂತ ಹಂತವಾಗಿ ಅವಕಾಶ ಜೋಡಿಸುವ ಮೂಲಕ ನಿರಂತರ ಸಂಭ್ರಮವಿರಬೇಕೆನ್ನುವುದು ಬೈಂದೂರು ಉತ್ಸವದ ಮೂಲ ಧ್ಯೇಯ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಗುರುವಾರ, ನ.1, 2, 3ರಂದು ನಡೆಯಲಿರುವ ಬೈಂದೂರು ಉತ್ಸವ-2024 ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಸಮೃದ್ಧ ಜನಸೇವಾ ಚಾರಿಟೆಬಲ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ, ಜಯಾನಂದ ಹೋಬಳಿದಾರ್, ಪುಷ್ಪರಾಜ್ ಶೆಟ್ಟಿ ಶಿರೂರು, ಗೌರಿ ದೇವಾಡಿಗ, ಶ್ರೀಗಣೇಶ ಉಪ್ಪುಂದ, ಜಗದೀಶ ಉಪ್ಪುಂದ, ಮೋಹನಚಂದ್ರ, ರವಿಚಂದ್ರ ಉಪ್ಪುಂದ, ಪಾಂಡುರಂಗ ಪಡಿಯಾರ್, ಸಂದೇಶ ಭಟ್, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಅನಿತಾ ಅರ್.ಕೆ., ಭಾಗೀರಥಿ ಸುರೇಶ್, ಸವಿತಾ ದಿನೇಶ್ ಮತ್ತಿತರರು ಇದ್ದರು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.