ಜಿಲ್ಲೆ

ಶ್ರೀಕಾಂತ ಪೂಜಾರ ಬಿಡುಗಡೆ

ಮರಿದೇವ ಹೂಗಾರ

ಹುಬ್ಬಳ್ಳಿ: ಹುಬ್ಬಳ್ಳಿ ಉಪ ಕಾರಾಗೃಹದಲ್ಲಿದ್ದ ರಾಮ ಭಕ್ತ ಶ್ರೀಕಾಂತ ಪೂಜಾರ ಅವರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು. ಜೈಲಿನಿಂದ ಹೊರಗಡೆ ಬರುತ್ತಿದ್ದಂತೆ, ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಪೂಜಾರಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಜೈಲಿನಿಂದ ಹೊರಗಡೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕಾಂತ ಪೂಜಾರ, ನನ್ನ ಮೇಲಿದ್ದ ಕೇಸ್‌ಗಳೆಲ್ಲ ಖುಲಾಸೆ ಆಗಿದ್ದವು. ನನ್ನ ಮೇಲೆ ಕೇಸ್ ಇರಲಿಲ್ಲ. ನನ್ನ ಬಂಧಿಸುವ ಮುನ್ನ ವಾರಂಟ್ ನೀಡಿಲ್ಲ, ಸಮನ್ಸ್ ಕೂಡ ಕೊಡದೇ ಪೊಲೀಸರು ಬಂಧಿಸಿದರು ಎಂದ ಅವರು, ರಾಮ ಮಂದಿರ ಉದ್ಘಾಟನೆಗೆ ಹೋಗಿಯೇ ಹೋಗುತ್ತೇನೆ ಎಂದರು.