ಬೆಂಗಳೂರು: ಸಾಹಿತಿ ಮತ್ತು ಕಲಾವಿದರ ವೇದಿಕೆಯು ವೃತ್ತಿ ರಂಗಭೂಮಿ ಕಲಾವಿದೆ ಜಯಲಕ್ಷ್ಮಿ ಪಾಟೀಲ ಅವರ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ರಂಗ ಬಾನಾಡಿ’ ಕೃತಿ ಬಿಡುಗಡೆ ಹಾಗೂ ಖ್ಯಾತ ಅಭಿನೇತ್ರಿ ಕಲ್ಪನಾ ಕುರಿತ ‘ಮಿನುಗುತಾರೆ’ ನಾಟಕ ಪ್ರದರ್ಶನ ಮಂಗಳವಾರ ಸಂಜೆ 6ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದೆ.
ಕೃತಿಯನ್ನು ಕಲಾವಿದೆ ಹಾಗೂ ಶಾಸಕಿ ಡಾ.ಉಮಾಶ್ರೀ ಬಿಡುಗಡೆಗೊಳಿಸಲಿದ್ದಾರೆ. ರಂಗಕರ್ಮಿ ಡಾ.ನಾ.ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಜಯಲಕ್ಷ್ಮಿ ಪಾಟೀಲ ರಚನೆಯ, ರೂಪಾಂತರ ತಂಡದ ಕೆಎಸ್ ಡಿಎಲ್ ಚಂದ್ರು ನಿರ್ದೇಶಿಸಿದ, ರಂಜಿತಾ ಸೂರ್ಯವಂಶಿ ಅಭಿನಯಿಸುವ ‘ಮಿನುಗುತಾರೆ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಾಹಿತಿ ಮತ್ತು ಕಲಾವಿದರ ವೇದಿಕೆಯ ಸಂಚಾಲಕ ಶ್ರೀನಿವಾಸ್ ಜಿ.ಕಪ್ಪಣ್ಣ ತಿಳಿಸಿದ್ದಾರೆ.