ಗಂಗೊಳ್ಳಿ: ರೋಗಗಳಿಗೆ ಪರಿಹಾರ ನೀಡುವ ಕರ್ತವ್ಯದೊಂದಿಗೆ ಜನಜಾಗೃತಿ ಮಾಡುವ ಕೆಲಸ ವೈದ್ಯರು ಮಾಡಬೇಕು. ಈ ಸೇವೆಯಿಂದ ಜನರ ಜೀವನದಲ್ಲಿ ಉತ್ಸಾಹ ಬೆಳೆಸಿದಂತಾಗುತ್ತದೆ ಎಂದು ದಂತ ವೈದ್ಯಕೀಯ ತಜ್ಞ, ಲೇಖಕ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಮಣಿಪಾಲ ಯುನಿವರ್ಸಲ್ ಪ್ರೆಸ್ ಹಾಗೂ ಕುಂದಪ್ರಭ ಸಂಸ್ಥೆ ಕುಂದಾಪುರ ಆಶ್ರಯದಲ್ಲಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ತಜ್ಞ ಡಾ.ಉಮೇಶ ಭಟ್ ಬಿ. ಅವರ ಆಂಗ್ಲ ಕಾದಂಬರಿ ‘ಫುಟ್‌ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್’ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮಣಿಪಾಲ ಯುನಿವರ್ಸಲ್ ಪ್ರೆಸ್ ಮ್ಯಾನೇಜಿಂಗ್ ಎಡಿಟರ್ ಅರವಿಂದ್ ಎನ್. ಅಧ್ಯಕ್ಷತೆ ವಹಿಸಿದ್ದರು. ಮಲೇಷ್ಯಾದ ನಿವೃತ್ತ ಪ್ರೊ.ಸರ್ಜನ್ ಡಾ.ಸಂತೋಷ ಪೈ ಉದ್ಘಾಟಿಸಿದರು. ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್, ಜಲಜಾ ತೋಳಾರ್ ಕುಂದಾಪುರ, ಮಹಾಲಕ್ಷ್ಮೀ ಸೋಮಯಾಜಿ ಕೋಟ, ಕೆಎಂಸಿ ಮಣಿಪಾಲದ ಡಾ.ರಾಜಗೋಪಾಲ ಶೆಣೈ, ಮಲಕಾ ಶುಭಹಾರೈಸಿದರು. ಕುಂದಪ್ರಭ ಸಂಸ್ಥೆ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ಡಾ.ಬಿ.ವಿ.ಉಡುಪ, ಮತ್ತು ಸುಮನಾ ಹೇರ್ಳೆ ಕೋಟ ಅತಿಥಿಗಳನ್ನು ಪರಿಚಯಿಸಿದರು. ಧಾರಿಣಿ ಕುಂದಾಪುರ ಸ್ವಾಗತ ಗೀತೆ ಹಾಡಿದರು. ಎಚ್.ಸೋಮಶೇಖರ ಶೆಟ್ಟಿ ಸಹಕರಿಸಿದರು. ರೇಡಿಯೋ ಕುಂದಾಪ್ರ ಸಂಯೋಜಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ರಮಾನಂದ ಕೆ. ವಂದಿಸಿದರು.