ಧಾರವಾಡ: ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬುಧವಾರ ಮರ್ಚೆಂಟ್ ಕ್ಯೂಆರ್ ಕೋಡ್ ಸೌಲಭ್ಯವನ್ನು ಬಿಡುಗಡೆ ಮಾಡಿದೆ.
ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಮಾತನಾಡಿ, ನಗದು ರಹಿತ ಆರ್ಥಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಡಿಜಿಟಲ್ ಪ್ಲಾಟ್‌ಫಾರ್ಮ್ಗಳಾದ ವಾಟ್ಸಾಪ್ ಬ್ಯಾಂಕಿAಗ್, ಮೊಬೈಲ್ ಬ್ಯಾಂಕಿAಗ್, ಇಂಟರ್ನೆಟ್ ಬ್ಯಾಂಕಿAಗ್, ಕಾಲ್‌ಸೆಂಟರ್ ಸೌಲಭ್ಯ ಮತ್ತು ಈಗ ವ್ಯಾಪಾರಿ ಕ್ಯೂಆರ್ ಕೋಡ್‌ಗಳ ಬಳಕೆಗೂ ಬ್ಯಾಂಕ್ ಮಹತ್ವ ನೀಡುತ್ತಿದೆ ಎಂದರು.
ಖರೀದಿದಾರರು ತಮ್ಮ ಕ್ರೆಡಿಟ್- ಡೆಬಿಟ್ ಕಾರ್ಡ್ಗಳನ್ನು ಸ್ವೈಪ್ ಮಾಡುವ ಬದಲು ವಹಿವಾಟುಗಳ ಪಾವತಿಗೆ ಇನ್ನುಮುಂದೆ ಬ್ಯಾಂಕಿನ ಕ್ಯೂಆರ್ ಕೋಡ್ ಸ್ಕಾ ್ಯನ್ ಮಾಡಿದರೆ ಸಾಕು. ಇದರೊಂದಿಗೆ ಸೌಂಡ್ ಬಾಕ್ಸ್ ಕೂಡ ಒದಗಿಸಲಾಗುತ್ತಿದೆ ಎಂದರು.
ಬ್ಯಾAಕ್‌ನ ಕ್ಯೂಆರ್ ಕೋಡ್ ಸ್ವೀಕರಿಸಿದ ಆರ್ಯು ಸೂಪರ್ ಭಜಾರ್ ಮಾಲೀಕ ಸುಬ್ರಮಣ್ಯ ಶೆಟ್ಟಿ ಮಾತನಾಡಿ, ಬ್ಯಾಂಕು ಹೊಸ ತಲೆಮಾರಿನ ಸೇವೆ ನೀಡುತ್ತಿರುವುದು ಸಂತಸಕರ ಎಂದರು.
ಬ್ಯಾAಕ್‌ನ ಐಟಿ ವಿಭಾಗದ ಮಹಾಪ್ರಬಂಧಕ ಎಂ. ಪುನೀತ್, ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಸ್. ಭಟ್, ಮಹಾಪ್ರಬಂಧಕ ವಿ. ತೆನ್ನರಸು, ಮುಖ್ಯ ಪ್ರಬಂಧಕರಾದ ವೆಂಕಟೇಶ, ಉಲ್ಲಾಸ ಗುನಗಾ, ಜಿ.ವಿ. ಕಾಮತ್, ಬಿ.ಎಸ್. ನರೇಗಲ್, ಇತರರಿದ್ದರು.